More

    ಸ್ವಾವಲಂಭಿಯಾಗಿ ಜೀವನ ಸಾಗಿಸಲು ಮುಂದಾಗಿ: ಲಯನ್ಸ್ ಕ್ಲಬ್ ಅಧ್ಯಕ್ಷ ಆಮರ ಪಾಟೀಲ್ ಅನಿಸಿಕೆ

    ಗಂಗಾವತಿ: ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಉಚಿತ ತರಬೇತಿ ಶಿಬಿರಗಳ ಮೂಲಕ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಕೆ.ಅಮರ ಪಾಟೀಲ್ ಹೇಳಿದರು.


    ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿರುವ ಹೊಲಿಗೆ ತರಬೇತಿ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಗರ ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಾಗಾರ ಅನುಕೂಲವಾಗಿದ್ದು, ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಆಸಕ್ತ ಪುರುಷರಿಗೂ ಅವಕಾಶವಿದೆ. ಹೊಲಿಗೆ, ್ಯಾಷನ್ ಡಿಸೈನ್, ಎಂಬ್ರಾಯಿಡ ಡಿಸೈನ್ ತರಬೇತಿ ನೀಡಲಾಗುವುದು. ಪ್ಲಾಸ್ಟಿಕ್ ನಿಷೇಧಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಪರಿಸರ ಸ್ನೇಹಿ ಬ್ಯಾಗ್ ತಯಾರಿಸುವ ಗುರಿಯಿದೆ ಎಂದರು.

    ಇದನ್ನೂ ಓದಿ: ಕೂಳೂರಿನಲ್ಲಿ ಲಯನ್ಸ್ ಕ್ಲಬ್ ಫಲ್ಗುಣಿ ಪದಗ್ರಹಣ


    ಸಂಸ್ಥೆ ಕಾರ್ಯದರ್ಶಿ ರವಿ ಚೈತನ್ಯರೆಡ್ಡಿ ಮಾತನಾಡಿದರು. ಸೇವಾ ವಲಯದ ಅಧ್ಯಕ್ಷ ಚಿಲಕೂರಿ ಸೂರ್ಯನಾರಾಯಣ, ಪದಾಧಿಕಾರಿಗಳಾದ ರಾಮಕೃಷ್ಣ, ಚೇತನ ಹಿರೇಮಠ, ಎಂ.ಶ್ರೀಕಾಂತ, ನಾಗೇಶ ಜನಾದ್ರಿ, ರಾಘವೇಂದ್ರ ಶಿರಿಗೇರಿ, ಡಿ.ಎಂ.ಅಭಿಷೇಕ, ಸತೀಶ ಭೋಜಶೆಟ್ಟರ್, ವೀರನಗೌಡ, ತರಬೇತಿ ಶಿಕ್ಷಕಿ ಸುನೀತಾ ಮೌನೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts