More

    ಕರೊನಾ ತಡೆಯಲು ವರ್ತಕರೇ ಕೈಗೊಂಡ ಸ್ವಯಂ ಲಾಕ್​ಡೌನ್ ನಾಳೆಯಿಂದ ಜಾರಿ

    ಚನ್ನಪಟ್ಟಣ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್​ ಹಾಕಲು ಸ್ಥಳೀಯ ವರ್ತಕರು ಸ್ವಯಂ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

    ನಗರದ ಎಂ.ಜಿ.ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನ ಆವರಣದಲ್ಲಿ ಬುಧವಾರ ಸಭೆ ನಡೆಸಿದ ವರ್ತಕರು ಈ ನಿರ್ಧಾರ ಕೈಗೊಂಡಿದ್ದಾರೆ. ನಾಳೆಯಿಂದ (ಜೂ.25) ಜುಲೈ 10ರವರೆಗೆ ಪ್ರತಿನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರವೇ ವ್ಯಾಪಾರ-ವಹಿವಾಟು ನಡೆಯಲಿದೆ. ನಂತರ ಸ್ವಯಂಪ್ರೇರಿತ ಲಾಕ್‍ಡೌನ್ ಆಗಲು ಒಮ್ಮತದ ತೀರ್ಮಾನ ನಡೆಸಿದ್ದಾರೆ. ಇದನ್ನೂ ಓದಿರಿ ಕರೊನಾದಿಂದ ಪಾರಾಗಲು ‘ಮದ್ದು’ ಕೊಟ್ಟಿದ್ದಾರೆ ಎಚ್​ಡಿಕೆ, ಸಮಸ್ಯೆಗೆ ಇದೊಂದೇ ಪರಿಹಾರ!

    ಆರ್ಥಿಕವಾಗಿ ನಷ್ಟವಾದರೂ ಪರವಾಗಿಲ್ಲ. ನಮ್ಮ ಹಾಗೂ ಸಾರ್ವಜನಿಕರ ಹಿತಕ್ಕಾಗಿ ಅರ್ಧದಿನ ಸ್ವಯಂಪ್ರೇರಿತ ಬಂದ್​ ಮಾಡಬೇಕು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ವಹಿವಾಟಿನ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯಸೇವೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಬೇಕು. ಈ ವಿಚಾರದಲ್ಲಿ ಯಾರನ್ನೂ ಬಲವಂತವಾಗಿ ಬಾಗಿಲು ಹಾಕಿಸಲು ಹೋಗಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಸಭೆಯಲ್ಲಿ ಭಾಗವಹಿಸಿದ್ದ ಪೂರ್ವ ಪೊಲೀಸ್ ಠಾಣೆ ಪಿಎಸ್‍ಐ ಪ್ರಕಾಶ್ ಮಾತನಾಡಿ, ಲಾಕ್‍ಡೌನ್ ನಿರ್ಧಾರ ಕೈಗೊಂಡಿರುವುದು ನಿಮ್ಮಗಳ ವಿವೇಚನೆಗೆ ಬಿಟ್ಟಿರುವ ನಿರ್ಧಾರ. ಸರ್ಕಾರದ ಯಾವುದೇ ಆದೇಶವಿಲ್ಲ. ಮುಂಜಾಗ್ರತಾ ಕ್ರಮವಾಗಿ ನೀವುಗಳು ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ಬಲವಂತವಾಗಿ ಬಂದ್​ ಮಾಡಿಸಬಾರದು ಎಂದು ಸೂಚಿಸಿದರು.

    ಸಭೆಯಲ್ಲಿ ನಗರ ವರ್ತಕರ ಸಂಘದ ಅಧ್ಯಕ್ಷ ಕಿಶೋರ್​ ಕುಮಾರ್, ಜುವೆಲ್ಲರಿ ಸಂಘದ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸಿ.ಜಿ. ರಮೇಶ್, ಜವಳಿ ಅಂಗಡಿ ಮಾಲೀಕ ಸುರೇಶ್, ಮಹಾಲಕ್ಷ್ಮೀ ಟೇಡರ್ಸ್‍ನ ನವೀನ್ ಮತ್ತಿತರರು ಉಪಸ್ಥಿತರಿದ್ದರು.

    ಇದನ್ನೂ ಓದಿರಿ 

    ಕೋರ್ಟ್​ ಸಿಬ್ಬಂದಿಗೆ ಕರೊನಾ ಪಾಸಿಟಿವ್​, ನ್ಯಾಯಾಧೀಶರಿಗೂ ಟೆನ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts