More

    ಸ್ವ ಉದ್ಯೋಗ ಕೈಗೊಂಡರೆ ಸ್ವಾವಲಂಬಿ ಜೀವನ: ಆರ್ಥಿಕ ಸಾಕ್ಷರತೆ ಅರಿವು ಕಾರ್ಯಕ್ರಮದಲ್ಲಿ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ ಶಾಸ್ತ್ರಿ ಸಲಹೆ

    ಜಗಳೂರು: ಶಿಕ್ಷಣ ಪಡೆದ ಯುವಕರು ಸರ್ಕಾರಿ ನೌಕರಿಗಾಗಿ ಕಾಯದೇ ಸ್ವಉದ್ಯೋಗ ಕೈಗೊಂಡರೆ ಸ್ವಾವಲಂಬಿ ಜೀವನ ಸಾಗಿಸಬಹುದು ಎಂದು ದಾವಣಗೆರೆ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ ಡಿ.ಶಾಸ್ತ್ರಿ ಹೇಳಿದರು.

    ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಸಣ್ಣ ಉದ್ಯಮ ಆರಂಭಿಸುವ ಮೂಲಕ ನಿವಾರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶ ಎಂದರು.

    ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಶಂಕರ್ ಕನವಳ್ಳಿ ಮಾತನಾಡಿ, ಸಾಲ ಸಿಗುವ ಒಂದೇ ಉದ್ದೇಶದಿಂದ ಯೋಜನಾ ಪಟ್ಟಿ ತೋರಿಸಿ ಸಾಲ ಪಡೆದು, ಉದ್ಯಮ ಮಾಡದೇ ಬೇರೆ ಕೆಲಸಕ್ಕೆ ಬಳಸಿದರೆ ಪ್ರಯೋಜನವಾಗುವುದಿಲ್ಲ. ಪಡೆದ ಸಾಲವನ್ನು ಮರುಪಾವತಿಸಿ ಹೆಚ್ಚಿನ ಅನುಕೂಲ ಪಡೆಯಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts