More

    ದೆಹಲಿಯಲ್ಲಿ ನಾಳೆಯಿಂದ ಮನೆಗೆಲಸದವರು ಕೆಲಸಕ್ಕೆ ಹೋಗಬಹುದು…

    ನವದೆಹಲಿ: ದೆಹಲಿಯಲ್ಲಿ ಸೋಮವಾರದಿಂದ ಲಾಕ್​ಡೌನ್​ ಅನ್ನು ಸ್ವಲ್ಪ ಸಡಿಲಗೊಳಿಸಲು ನಿರ್ಧರಿಸಿರುವುದಾಗಿ ಸಿಎಂ ಅರವಿಂದ ಕೇಜ್ರೀವಾಲ್​ ತಿಳಿಸಿದ್ದಾರೆ.

    ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮನೆಗೆಲಸದವರು, ಕೊಳಾಯಿ ಕೆಲಸದವರು, ಟೆಕ್ನೀಷಿಯನ್​ಗಳು ಸೇರಿ ಸ್ವ ಉದ್ಯೋಗ ಮಾಡುತ್ತಿರುವವರೆಲ್ಲರೂ ತಮ್ಮ ಕೆಲಸಗಳಿಗೆ ಹೋಗಬಹುದಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ದೇಶಕ್ಕೆ ರಿಲೀಫ್​ ಸಿಕ್ಕರೂ ಮುಂಬೈ, ಪುಣೆ ನಗರಗಳಿಗಿಲ್ಲ ರಿಲೀಫ್​

    ದೆಹಲಿಯ ಎಲ್ಲ ಬಡಾವಣೆಗಳಲ್ಲಿರುವ ಅಗತ್ಯ ಮತ್ತು ಅನಗತ್ಯ ವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳನ್ನು ಎಂದಿನಂತೆ ತೆರಯಬಹುದಾಗಿದೆ. ಆದರೆ ಇ-ಕಾಮರ್ಸ್​ ಕಂಪನಿಗಳು ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಡೆಲಿವರಿ ಕೊಡಬಹುದಾಗಿದೆ ಎಂದು ತಿಳಿಸಿದರು.

    ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.33 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೇಳಿದರು.
    ಶಾಲೆ-ಕಾಲೇಜುಗಳು, ಕೋಚಿಂಗ್​ ಸಂಸ್ಥೆಗಳು, ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಸಂಪೂರ್ಣವಾಗಿ ಮುಚ್ಚಿರಲಿವೆ. ಕ್ಷೌರದ ಅಂಗಡಿಗಳು, ಸ್ಪಾಗಳ ಬಾಗಿಲನ್ನು ಇನ್ನೆರಡು ವಾರ ತೆಗೆಯುವಂತಿಲ್ಲ ಎಂದು ತಿಳಿಸಿದ್ದಾರೆ.

    VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts