More

    ಜಿಪಂ ಕ್ಷೇತ್ರಗಳ ಗಡಿ ಗುರುತಿಸಿದ ಆಯೋಗ; ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳಿಗೆ ಆಹ್ವಾನ

    ಬೆಂಗಳೂರು: ಜನಗಣತಿ ಅಂಕಿ-ಅಂಶದ ಆಧಾರದ ಮೇಲೆ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗುರುತಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಅಗತ್ಯ ಸಂಖ್ಯೆಯನ್ನು ನಿಗದಿ ಪಡಿಸಲು ಹಿಂದೆ ‘ಸರ್ಕಾರ ಸೀಮಾ ನಿರ್ಣಯ ಆಯೋಗ’ ರಚಿಸಿತ್ತು. ಇದೀಗ ಸೀಮಾ ನಿರ್ಣಯ ಆಯೋಗ ವರದಿ ಮಂಡನೆ ಮಾಡಿದ್ದು ಸಾರ್ವಜನಿಕರಿಂದ ಆಕ್ಷೇಪಣಾ ಅರ್ಜಿಗೆ ಆಹ್ವಾನ ನೀಡಿದೆ.

    ಸದ್ಯ ಜಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ಕ್ಷೇತ್ರ ಮರುವಿಂಗಡಣೆ ಮಾಹಿತಿ ಬಹಿರಂಗ ಪಡಿಸಲಾಗಿದ್ದು, ಅಲ್ಲಿ ಬರುವ ಪ್ರತೀ ಕ್ಷೇತ್ರದ ವ್ಯಾಪ್ತಿ, ಅಲ್ಲಿರುವ ಗ್ರಾಮಗಳ ವಿವರಣೆ ಇದೆ.

    ಇದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜನರಿಗೆ ಯಾವುದೇ ರೀತಿಯ ಆಕ್ಷೇಪಣೆಗಳು ಇದ್ದಲ್ಲಿ, ದಿನಾಂಕ 16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ನಿಮ್ಮ ಅರ್ಜಿಯನ್ನು ಕೆಳಗೆ ನೀಡಲಾಗಿರುವ ಬೆಬ್​ಸೈಟ್​ನಲ್ಲಿ ಸಲ್ಲಿಸಲು ಮನವಿ ಮಾಡಿದೆ.

    ನಿಮ್ಮ ಆಕ್ಷೇಪಣೆಗಳನ್ನು ಆನ್​ಲೈನ್ ಮೂಲಕ, ಖುದ್ದಾಗಿ ಹೋಗಿ ಅಥವಾ ಅಂಚೆಯ ಮೂಲಕ ಈ ವಿಳಾಸಕ್ಕೆ ಸಲ್ಲಿಸಬಹುದು. ಜ.16ರ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದೂ ಆಯೋಗ ಹೇಳಿದೆ.

    1) ಆನ್​ಲೈನ್: ವೆಬ್ ಸೈಟ್ ವಿಳಾಸ: ಇಲ್ಲಿ ಕ್ಲಿಕ್​ ಮಾಡಿ
    ಲಿಂಕ್​: https://rdpr.karnataka.gov.in/rdc/public/
    ಈ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ‘ಸಾರ್ವಜನಿಕ ಸಲಹೆಗಳು’ ಎಂಬಹೆಡ್ಡಿಂಗ್​ ಕ್ಲಿಕ್​ ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

    2) ಅಂಚೆ ಮೂಲಕ ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ:
    ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ. 3ನೇ ಗೇಟ್, 2ನೇ ಮಹಡಿ,
    ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001

    ನೀವು ಮೇಲ್ಕಂಡ ವಿಳಾಸಕ್ಕೆ ಖುದ್ದಾಗಿ ಹೋಗಿಯೂ ಆಕ್ಷೇಪಣೆ ಸಲ್ಲಿಸಬಹುದು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts