More

    ನಾನಿಂದು ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ ಏಕೆಂದರೆ… ಪ್ರಾಣ ಪ್ರತಿಷ್ಠಾ ಬಳಿಕ ಪ್ರಧಾನಿ ಮೋದಿ ಭಾವುಕ

    ಅಯೋಧ್ಯೆ: ನಾನಿಂದು ಭಗವಾನ್ ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ಏಕೆಂದರೆ, ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನಾದರೂ ಕೊರತೆಯಿರಬೇಕು. ಹೀಗಾಗಿ ಇಷ್ಟು ಶತಮಾನಗಳಿಂದ ರಾಮ ಮಂದಿರ ನಿರ್ಮಾಣ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಆ ಕೆಲಸ ಇಂದು ಪೂರ್ಣಗೊಂಡಿದೆ. ರಾಮನು ನಮ್ಮನ್ನು ಖಂಡಿತ ಕ್ಷಮಿಸುತ್ತಾನೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರವನ್ನು ಉದ್ಘಾಟಿಸಿ, ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು.

    ಭಗವಾನ್ ರಾಮನ ಅಸ್ತಿತ್ವಕ್ಕಾಗಿ ದಶಕಗಳ ಕಾಲ ಕಾನೂನು ಹೋರಾಟ ನಡೆಯಿತು. ನ್ಯಾಯ ಸಲ್ಲಿಸಿದ ಭಾರತದ ನ್ಯಾಯಾಂಗಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

    ಆ ಕಾಲಘಟ್ಟದಲ್ಲಿ ಅಂದರೆ, ರಾಮಾಯಣದಲ್ಲಿ ಅಗಲಿಕೆ ಕೇವಲ 14 ವರ್ಷಗಳ ಕಾಲ ಮಾತ್ರ. ಆದರೆ, ಈ ಯುಗದಲ್ಲಿ ಅಯೋಧ್ಯೆ ಮತ್ತು ದೇಶವಾಸಿಗಳು ನೂರಾರು ವರ್ಷಗಳ ವಿರಹವನ್ನು ಅನುಭವಿಸಿದ್ದಾರೆ. ನಮ್ಮ ಅನೇಕ ತಲೆಮಾರುಗಳು ಈ ಪ್ರತ್ಯೇಕತೆಯ ನೋವನ್ನು ಅನುಭವಿಸಿದ್ದಾರೆ ಎಂದು ಹೇಳುವ ಮೂಲಕ ರಾಮಾಯಣದ ವನವಾಸಕ್ಕೂ ಭಕ್ತರ ದೀರ್ಘಕಾಲಕ ಕಾಯುವಿಕೆಯ ನೋವಿಗೂ ಹೋಲಿಕೆ ಮಾಡಿ ಪ್ರಧಾನಿ ಮೋದಿ ಮಾತನಾಡಿದರು.

    ನನಗೆ ಮಧ್ಯಪ್ರದೇಶದ ಸಾಗರ್‌ನಿಂದ ಸರಯೂವರೆಗೂ ಪ್ರಯಾಣಿಸುವ ಅವಕಾಶ ಸಿಕ್ಕಿತು. ಸಾಗರ್‌ನಿಂದ ಸರಯೂವರೆಗೂ ರಾಮನ ಹೆಸರಿನ ಅದೇ ಹಬ್ಬದ ಉತ್ಸಾಹ ಎಲ್ಲೆಡೆ ಗೋಚರಿಸುತ್ತದೆ. ರಾಮಮಂದಿರವು ರಾಮನ ರೂಪದಲ್ಲಿರುವ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ. ರಾಮ ಭಾರತದ ನಂಬಿಕೆ, ರಾಮ ಭಾರತದ ಅಡಿಪಾಯ, ರಾಮನೇ ಭಾರತದ ಕಲ್ಪನೆ, ರಾಮನೇ ಭಾರತದ ಕಾನೂನು, ರಾಮನೇ ಭಾರತದ ಪ್ರತಿಷ್ಠೆ, ರಾಮನೇ ಭಾರತದ ಕೀರ್ತಿ, ರಾಮನೇ ನಾಯಕ ಮತ್ತು ರಾಮನೇ ನೀತಿ ಹಾಗೂ ರಾಮ ಎಂದೆಂದಿಗೂ ಶಾಶ್ವತ ಎಂದು ಗುಣಗಾನ ಮಾಡಿದ ಪ್ರಧಾನಿ ಮೋದಿ, ರಾಮನನ್ನು ಗೌರವಿಸಿದಾಗ ಅದರ ಪ್ರತಿಫಲವು ವರ್ಷಗಳು ಅಥವಾ ಶತಮಾನಗಳವರೆಗೆ ಇರುವುದಿಲ್ಲ, ಬದಲಿಗೆ ಸಾವಿರಾರು ವರ್ಷಗಳವರೆಗೆ ಇರುತ್ತದೆ ಎಂದರು.

    ಕೆಲವರು ರಾಮಮಂದಿರ ಬನಾ ತೋ ಆಗ್ ಲಗ್ ಜೇಗಿ ಎಂದು ಹೇಳುತ್ತಿದ್ದ ಕಾಲವೂ ಇತ್ತು, ಅಂತಹ ಜನರಿಗೆ ಭಾರತದ ಸಾಮಾಜಿಕ ಮನೋಭಾವದ ಪರಿಶುದ್ಧತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ರಾಮಲಲ್ಲಾ ಮಂದಿರದ ನಿರ್ಮಾಣ ಭಾರತೀಯ ಸಮಾಜದ ಶಾಂತಿ, ತಾಳ್ಮೆ, ಪರಸ್ಪರ ಸೌಹಾರ್ದತೆ ಮತ್ತು ಸಮನ್ವಯದ ಸಂಕೇತವೂ ಆಗಿದೆ. ಈ ನಿರ್ಮಾಣವು ಯಾವುದೇ ದ್ವೇಷದ ಬೆಂಕಿಗೆ ಜನ್ಮ ನೀಡುತ್ತಿಲ್ಲ, ಆದರೆ ಧಾರ್ಮಿಕ ಶಕ್ತಿಗೆ ಜನ್ಮ ನೀಡುತ್ತಿದೆ ಎಂದು ನಾವು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

    ಅಯೋಧ್ಯೆಯಲ್ಲಿ ರಾಮನನ್ನು ಯಾವ ರೀತಿ ಪೂಜಿಸ್ತಾರೆ? ನಿಮ್ಮ ಊಹೆಗೂ ನಿಲುಕಲ್ಲ.. ಇಲ್ಲಿದೆ ಅಚ್ಚರಿ ಮಾಹಿತಿ…

    ಮಂದಹಾಸ ಬೀರುತ್ತಿರುವ ಬಾಲರಾಮನ ಮೊದಲ ನೋಟ ಇಲ್ಲಿದೆ ನೋಡಿ… ಭಾವಪರವಶವಾಗೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts