ಬೆಂಗಳೂರು: ನಟಿಯರು, ರೂಪದರ್ಶಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ, ಅದು ಅಪರೂಪವೂ ಅಲ್ಲ. ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ತಾವು ಹಾಗೆ ಬಿಕಿನಿಯಲ್ಲಿರುವ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ರಜೆ ಮೂಡ್ನಲ್ಲಿರುವ ರಾಕುಲ್ ಪ್ರೀತ್ ಸಿಂಗ್ ತಮ್ಮ ಫ್ಯಾಮಿಲಿ ಜತೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಒಂದೊಂದೇ ಫೋಟೋ ಕೂಡ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಲೂ ಇದ್ದಾರೆ. ವಿಶೇಷವೆಂದರೆ ಬಿಕಿನಿಯಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿರುವ ರಾಕುಲ್, ಅದಕ್ಕೊಂದು ವಿಶೇಷವಾದ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.
ವಿಶೇಷವೆಂದರೆ ಅವರು ಬಿಕಿನಿಯಲ್ಲಿರುವ ಚಿತ್ರವನ್ನು ಅವರ ತಂದೆಯೇ ಕ್ಲಿಕ್ಕಿಸಿದ್ದಾರೆ. ತಂದೆಗೆ ನಗುತ್ತಲೇ ಪೋಸ್ ನೀಡಿರುವ ರಾಕುಲ್ ಆ ಚಿತ್ರಕ್ಕೆ, ‘ನಗು ಸಾಂಕ್ರಾಮಿಕ, ಅದನ್ನು ಹರಡಿ.. ಫೋಟೋ ಕ್ಲಿಕ್ಕಿಸಿದ್ದು ಡ್ಯಾಡಿ ದಿ ಗ್ರೇಟ್’ ಎಂಬ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CH11DjihAdS/
ಇನ್ನೊಮ್ಮೆ ಬಿಕಿನಿಯಲ್ಲೇ ಮೈಬಾಗಿಸಿ ಬಿಸಿಲಿನಲ್ಲಿ ಆಕಾಶವನ್ನು ನೋಡುತ್ತ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಕೂಡ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರಾಕುಲ್, ‘ವಿಟಮಿನ್ ಡಿ ಡೋಸ್ ತೆಗೆದುಕೊಳ್ಳುತ್ತಿದ್ದೇನೆ’ ಎಂಬ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
https://www.instagram.com/p/CH0P144hLUj/
ಅವಳು ನನ್ನ ಗಂಡನ ಜತೆಗಿದ್ದಾಳೆ ಎಂದು ಇವಳು ಕೋಣೆಗೆ ಬೀಗ ಹಾಕಿದಳು; ಗಂಡ-ಹೆಂಡತಿ ಮತ್ತು ಅವಳು.. ಆಮೇಲಾಗಿದ್ದೇನು?
ಹಂಪ್ನಲ್ಲಿ ಅಮ್ಮನ ಕೈಯಿಂದ ಕೆಳಕ್ಕೆ ಬಿದ್ದು 1 ವರ್ಷದ ಮಗು ಸಾವು; ಮದ್ವೆ ಮುಗಿಸಿ ಬೈಕ್ನಲ್ಲಿ ಮರಳುತ್ತಿದ್ದಾಗ ಅವಘಡ