More

    ವೇದ ಅಧ್ಯಯನದಿಂದ ಧರ್ಮದ ಅರಿವು ಸಾಧ್ಯ

    ಸೇಡಂ: ಜೀವನವು ಧರ್ಮ ಮಾರ್ಗದಲ್ಲಿ ನಡೆಯಬೇಕಾದರೆ ಎಲ್ಲರೂ ವೇದವನ್ನು ಅಧ್ಯಯನ ಮಾಡಬೇಕು. ವೇದ ನಮಗೆ ಸತ್ಯ ಮಾರ್ಗದಲ್ಲಿ ಸಾಗಿಸುವ ಕೈಪಿಡಿಯಾಗಿದೆ ಎಂದು ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಹೇಳಿದರು.

    ಶಿವಶಂಕರೇಶ್ವರ ಮಠದಲ್ಲಿ ಶ್ರೀ ಶಿವಶಂಕರೇಶ್ವರ ಮಠ ಚಾರಿಟೇಬಲ್ ಮತ್ತು ವೆಲ್‌ಫೇರ್ ಟ್ರಸ್ಟ್​ನಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಿವಾರ್ಚನೆ ಕೃತಿ ಲೋಕಾರ್ಪಣೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಪೂರ್ವ ಕಾಲದ ಶಿಕ್ಷಣ ಪದ್ಧತಿಯಲ್ಲಿ ೬ ಪ್ರಕಾರಗಳು. ಅವುಗಳಲ್ಲಿ ಶ್ರುತಿಯೂ ಒಂದು. ಶ್ರುತಿಯಲ್ಲಿನ ನಾಲ್ಕು ಗ್ರಂಥಗಳಿದ್ದು, ಅವುಗಳೇ ನಾಲ್ಕು ವೇದಗಳು. ವೇದಗಳನ್ನು ಅಧ್ಯಯನ ಮಾಡಲು ಯಾವುದೇ ನಿಯಮ, ಕಟ್ಟುಪಾಡುಗಳಿಲ್ಲ. ಆದರೆ ಕೆಲವು ಕ್ರಿಯಾ, ಕರ್ಮಗಳನ್ನು ಮಾಡಲು ಬದಲಾವಣೆಗಳು ಇರುವುದು ಕಾಣಬಹುದು ಎಂದು ತಿಳಿಸಿದರು.

    ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಿವಶಂಕರ ಶ್ರೀಗಳು ತಪೋನಿಷ್ಠರು, ಪವಾಡ ಪುರುಷರಾಗಿದ್ದರು. ನೀರಿನಿಂದ ತುಪ್ಪವನ್ನು ಮಾಡಿರುವುದು, ಒಂದು ಪ್ರಾಂತದಲ್ಲಿ ಆವರಿಸಿದ ವ್ಯಾಧಿಯನ್ನು ತಮ್ಮ ಪಾದೋದಕದಿಂದ ದೂರ ಮಾಡಿರುವುದು ಸೇರಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ಅವರ ಜೀವನ ಚರಿತ್ರೆಯನ್ನು ನಾಟಕದಲ್ಲಿ ಪ್ರಸ್ತುತಪಡಿಸುವ ಕರ‍್ಯಕ್ಕೆ ಶ್ರೀಮಠದ ಸಮಿತಿ ಮುಂದಾಗಬೇಕು ಎಂದು ತಿಳಿಸಿದರು.

    ವೀರಶೈವ ಶೈಕ್ಷಣಿಕ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಅಖಿಲ ಭಾರತ ವೀರಶೈವ-ಲಿಂಗಾಯತ ಸಮಾಸಭಾ ತಾಲೂಕು ಅಧ್ಯಕ್ಷ ಚಂದ್ರಶೆಟ್ಟಿ ಬಂಗಾರ, ಗೌರವಾಧ್ಯಕ್ಷ ಶರಣಬಸಪ್ಪ ಹಾಗರಗಿ, ಮಠದ ಟ್ರಸ್ಟ್ ಉಪಾಧ್ಯಕ್ಷ ಸಿದ್ದಪ್ಪ ನೀಲಂಗಿ, ಪ್ರಮುಖರಾದ ವಿದ್ಯಾಸಾಗರ ಗುಂಡಗುರ್ತಿ, ವೀರಯ್ಯಸ್ವಾಮಿ ಮೂಲಿಮನಿ ಇದ್ದರು.

    ಕುಪೇಂದ್ರ ರೋಳಾ, ಅಂಬಾರಾವ ಪಾಟೀಲ್, ಚಂದ್ರಶೇಖರ ಗದ್ವಾಲ್ ಅವರನ್ನು ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts