More

    ಊಟದ ಡಬ್ಬಿಯಲ್ಲಿ ಕಾಶ್ಮೀರ ಉಗ್ರರಿಗೆ ಬರುತ್ತಿದ್ದದ್ದು ಬುತ್ತಿಯಲ್ಲ… ಮತ್ತೇನು?

    ನವದೆಹಲಿ: ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಲಷ್ಕರ್​ ಎ ತೊಯ್ಬಾದ ಉಗ್ರರು ಸಿದ್ಧತೆ ನಡೆಸಿರುವುದು ಇತ್ತೀಚೆಗಿನ ಗುಪ್ತಚರ ಮಾಹಿತಿಯಲ್ಲಿ ಬಹಿರಂಗವಾಗಿತ್ತು. ಇದೀಗ ಯಾತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರಿಗೆ ಆರ್ಥಿಕ ನೆರವು ಒದಗಿಸಲು ಲಷ್ಕರ್​ ಉಗ್ರರು ಹೊಸತೊಂದು ಮಾರ್ಗ ಆಯ್ಕೆ ಮಾಡಿಕೊಂಡಿದ್ದರು ಎಂಬ ಸಂಗತಿ ಬಯಲಾಗಿದೆ.

    ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಹಾಗೂ ಭಾರತೀಯ ಸೇನಾಪಡೆಯ ಯೋಧರನ್ನು ಒಳಗೊಂಡು ಉಗ್ರರ ನಿಗ್ರಹಕ್ಕೆ ರಚಿಸಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್​ಒಜಿ) ಇದನ್ನು ಬಯಲು ಮಾಡಿದ್ದು, ಊಟದ ಡಬ್ಬಿಗಳಲ್ಲಿ ಬುತ್ತಿಯ ಬದಲು ಉಗ್ರರಿಗೆ ಹಣ ತಲುಪಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ.

    ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಜಮ್ಮು ವಲಯದ ಐಜಿಪಿ ಮುಖೇಶ್​ ಸಿಂಗ್​, ಜಮ್ಮು ಮತ್ತು ಕಾಶ್ಮೀರದಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮುವಿನಲ್ಲಿ ಹಿಂಸಾಕೃತ್ಯ ಎಸಗಲು ಲಷ್ಕರ್​ ಎ ತೊಯ್ಬಾದ ಪ್ರಮುಖ ಉಗ್ರರು ತಮ್ಮ ಜಾಲವನ್ನು ಜಾಗೃತಗೊಳಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿತ್ತು. ಇದಕ್ಕಾಗಿ ಉಗ್ರರಿಗೆ ಅಗತ್ಯವಾದ ಆರ್ಥಿಕ ನೆರವು ತಲುಪಿಸಲು ಉಗ್ರರು ವಿಶೇಷವಾದ ಉಪಾಯ ಮಾಡಿದ್ದಾರೆ ಎಂಬುದೂ ಗೊತ್ತಾಗಿತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಮುಸ್ಲಿಮರಿಗೆ ಮಸೀದಿಗಳಲ್ಲಿ ನಮಾಜ್​ ಮಾಡಲು ಅವಕಾಶ ಕೊಟ್ಟರೆ ಕರೊನಾ ನಿಯಂತ್ರಣಕ್ಕೆ ಬರುತ್ತದೆ…’

    ಈ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿರುವಾಗ ಎಸ್​ಒಜಿ ಕೈಗೆ ಸಜಾನ್​ ದೋಡಾದ ನಿವಾಸಿ ಮುಭಾಶಿರ್​ ಬಟ್​ ಎಂಬಾತ ಸಿಕ್ಕಿಬಿದ್ದಿದ್ದ. ಗಡಿಯಾಚೆಯಿಂದ ಹವಾಲಾ ಮಾರ್ಗದಲ್ಲಿ ಜಮ್ಮುವನ್ನು ತಲುಪಿದ್ದ ಹಣವನ್ನು ತಂದು ಉಗ್ರರಿಗೆ ತಲುಪಿಸುವುದು ಈತನ ಜವಾಬ್ದಾರಿಯಾಗಿತ್ತು ಎಂದು ವಿವರಿಸಿದ್ದಾರೆ.

    ಈತನನ್ನು ಶೋಧಿಸಿದಾಗ ಊಟದ ಡಬ್ಬಿಗಳಲ್ಲಿ ಬಚ್ಚಿಡಲಾಗಿದ್ದ 1.5 ಲಕ್ಷ ರೂಪಾಯಿ ನಗದು ಪತ್ತೆಯಾಯಿತು ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಹರೂನ್​ ಎಂಬ ಲಷ್ಕರ್​ನ ಪ್ರಮುಖ ಉಗ್ರನೊಬ್ಬ ದೂಡಾದಲ್ಲಿರುವ ಭೂಗತರಾಗಿ ಕೆಲಸ ಮಾಡುವ ಉಗ್ರರ ಮೂಲಕ ಈ ಹಣವನ್ನು ಕಳುಹಿಸಿದ್ದಾಗಿ ತಿಳಿಸಿದ ಎಂದು ಹೇಳಿದ್ದಾರೆ.

    ದೇಶದಲ್ಲಿ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಮೂರೇ ದಿನದಲ್ಲಿ ಲಕ್ಷ ದಾಟಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts