More

    ಏಷ್ಯನ್ ಕಪ್: ಇಂದು ಭಾರತ-ಆಸ್ಟ್ರೇಲಿಯಾ ಪುಟ್‌ಬಾಲ್ ಕದನ

    ಅಲ್ ರಯಾನ್ (ಕತಾರ್): ಫಿಫಾ ವಿಶ್ವಕಪ್ ಬಳಿಕ ಮತ್ತೊಂದು ಪ್ರತಿಷ್ಠಿತ ುಟ್‌ಬಾಲ್ ಟೂರ್ನಿ ಎಎಫ್ಸಿ ಏಷ್ಯನ್ ಕಪ್‌ಗೆ ಅರಬ್ ರಾಷ್ಟ್ರ ಆತಿಥ್ಯವಹಿಸಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲಿದೆ. ಕ್ವಾರ್ಟರ್‌ಫೈನಲ್‌ಗೇರಲು ಸುನೀಲ್ ಛೇಟ್ರಿ ಬಳಗಕ್ಕೆ ಇದು ಮೊದಲ ಸವಾಲಾಗಿದೆ.

    2023ರಲ್ಲಿ ಚೀನಾದಲ್ಲಿ ನಿಗದಿಯಾಗಿದ್ದ ಟೂರ್ನಿ ಕರೋನಾದಿಂದಾಗಿ ಮುಂದೂಡಲ್ಪಟ್ಟಿತು. ಬಳಿಕ ಕತಾರ್ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. 2011 ಹಾಗೂ 2019ರಲ್ಲಿ ಗುಂಪು ಹಂತದಲ್ಲಿ ಹೊರಬಿದ್ದಿದ್ದ ಭಾರತ ಈ ಬಾರಿ ಸುಧಾರಿತ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಟೂರ್ನಿಯ ಬಿ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಉಜ್ಬೇಕಿಸ್ತಾನ ಹಾಗೂ ಸಿರಿಯಾ ತಂಡಗಳಿವೆ. ಭಾರತ 1956ರಿಂದ ಈವರೆಗೆ 4 ಬಾರಿ ಟೂರ್ನಿಯಲ್ಲಿ ಆಡಿದೆ. 1964ರಲ್ಲಿ ರನ್ನರ್ ಅಪ್ ಆಗಿದ್ದು ಶ್ರೇಷ್ಠ ಸಾಧನೆ ಎನಿಸಿದೆ. 39 ವರ್ಷದ ಸುನೀಲ್ ಛೇಟ್ರಿಗೆ ಇದು 3ನೇ ಏಷ್ಯನ್ ಕಪ್ ಟೂರ್ನಿ ಎನಿಸಿದೆ. 2015ರ ಚಾಂಪಿಯನ್ ಆಸ್ಟ್ರೇಲಿಯಾ ೇವರಿಟ್ ಎನಿಸಿದೆ.

    ಟೂರ್ನಿ ಸ್ವರೂಪ: ಒಟ್ಟು 24 ತಂಡಗಳನ್ನು ತಲಾ 4ರಂತೆ 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ-2 ತಂಡ ಹಾಗೂ ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ 6 ತಂಡಗಳಲ್ಲಿ ಅತ್ಯುತ್ತಮ 4 ತಂಡಗಳು ಪ್ರಿ ಕ್ವಾರ್ಟರ್‌ೈನಲ್‌ಗೆ ಅರ್ಹತೆ ಪಡೆಯಲಿವೆ.
    ಆಸ್ಟ್ರೇಲಿಯಾ ಫಿಾ ರ‌್ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿದ್ದರೆ, ಉಜ್ಬೇಕಿಸ್ತಾನ 68 ಸ್ಥಾನದಲ್ಲಿದೆ. ಭಾರತ ತಂಡ ಯುವ ಹಾಗೂ ಅನುಭವಿಗಳಿಂದ ಕೂಡಿದೆ. ಉಭಯ ತಂಡಗಳು 8 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು,ಆಸ್ಟ್ರೇಲಿಯಾ 4, ಭಾರತ 3 ಬಾರಿ ಜಯಿಸಿದರೆ, ಒಂದು ಡ್ರಾನಲ್ಲಿ ಅಂತ್ಯ ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts