More

    ಪಂಥ ಮೀರಿ ಐಕ್ಯತೆ ತಂದವರು ರಾನಡೆ

    ಬೆಳಗಾವಿ: ಶ್ರೀ ಗುರುದೇವ ರಾನಡೆ ಅವರು ಎಲ್ಲ ಜಾತಿ, ಧರ್ಮ ಹಾಗೂ ಪಂಥ ಮೀರಿ ಅನುಭಾವದಡಿ ಐಕ್ಯತೆ ಮೂಡಿಸಿದವರು ಎಂದು ಅಕಾಡೆಮಿ ಆಫ್ ಕಂಪೆರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜಿಯನ್ ಕಾರ್ಯದರ್ಶಿ ಎಂ.ಬಿ.ಝಿರಲಿ ಹೇಳಿದ್ದಾರೆ.

    ನಗರದ ಹಿಂದವಾಡಿ ಪ್ರದೇಶದಲ್ಲಿರುವ ಎಸಿಪಿಆರ್ ಗುರುದೇವ ರಾನಡೆ ಮಂದಿರದ ಸಭಾಗೃಹದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಶರಣೆ ’ಶ್ರೀ ಶಿವಲಿಂಗವ್ವ-ಚರಿತ್ರೆ ಮತ್ತು ಸಾಧನ ಸೋಪಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುದೇವ ರಾನಡೆ ಅವರಂತೆಯೇ ತೌಲನಿಕ ಅಧ್ಯಯನ ಮತ್ತು ಸಮನ್ವಯ ಮಾರ್ಗವನ್ನು ಶಿವಶರಣೆ ಶಿವಲಿಂಗವ್ವ ತೋರಿದ್ದಾರೆ ಎಂದರು. ನಿಡಸೋಸಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಜಗದ್ಗುರು ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಮಹಿಳೆಯರು ವಿಶೇಷ ಶಕ್ತಿ ಹೊಂದಿರುತ್ತಾರೆ.

    ಶರಣೆ ಶಿವಲಿಂಗವ್ವ ಅವರು ಸಾಧನೆ, ಸಂತರು ಹಾಗೂ ಆತ್ಮಜ್ಞಾನದ ಅನುಭವ ಹೇಳಿದ್ದಾರೆ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದರು. ಅದಕ್ಕೂ ಮುನ್ನ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹಾಗೂ ಡಾ.ಗುರುದೇವಿ ಹುಲೆಪ್ಪನವರಮಠ ಸೇರಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಶೌರ್ಯ ಪ್ರಶಸ್ತಿ ಪಡೆದ ರೇಂಜ್ ಫಾರೆಸ್ಟ್ ಆಫೀಸರ್ ಸುನೀತಾ ನಿಂಬರಗಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts