More

    ವಿಧಾನಸೌಧದ ಕೊಠಡಿ ನಂ. 13ರ ರಹಸ್ಯ- ನಿಮಗೇನಾದರೂ ಗೊತ್ತ?

    ಬೆಂಗಳೂರು: ವಿಧಾನಸೌಧ ನಿರ್ವಹಿಸುವ ಎಇಇ ಅಮಾನತು ಮಾಡಿದ ಪ್ರಕರಣದ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿದ್ದು, ಅಕ್ರಮದ ಘಾಟು ಈ ಕಠಿಣ ಕ್ರಮಕ್ಕೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ವಿಧಾನಸೌಧ ಕಟ್ಟಡದ ಮೇಲ್ಛಾವಣಿಯನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ ಮಾಡಿರಲಿಲ್ಲ, ಕೊಳವೆಯಲ್ಲಿ ಕಸಕಡ್ಡಿ ತುಂಬಿ ಮಳೆ ನೀರು ಕಟ್ಟಡದ ಮೇಲ್ಭಾಗದಲ್ಲಿ ಸಂಗ್ರಹವಾಗಿತ್ತು ಎಂಬುದೂ ಸೇರಿ ವಿವಿಧ ಕ್ಷುಲ್ಲಕ ಕಾರಣಗಳಿಗೆ ಎಇಇ ಅವರನ್ನು ಜೂ.25ರಂದು ಅಮಾನತು ಮಾಡಲಾಗಿತ್ತು. ವಿಧಾನ ಸೌಧದ ನಿರ್ವಹಣೆ ಮಾಡುವ ಈ ‘ಎಇಇ’ ಹುದ್ದೆ ಮೇಲೆ ಹತ್ತು ಮಂದಿ ಕಣ್ಣಿಟ್ಟು ಪೈಪೋಟಿ ನಡೆಸಿದ್ದರು, ಈ ಪೈಕಿ ಒಬ್ಬರೊಂದಿಗೆ ‘ವ್ಯವಹಾರ’ ಕುದುರಿಸುವ ಪ್ರಯತ್ನವೂ ನಡೆದಿದೆ. ಈ ಹಿನ್ನೆಲೆಯಲ್ಲೇ ಅಮಾನತು ಆದೇಶ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

    ಪಿಡಬ್ಲ್ಯುಡಿ ಸಚಿವರ ನಿರಾಸಕ್ತಿ!

    ಅಮಾನತು ರದ್ದು ಮಾಡುವಂತೆ ಮುಖ್ಯಮಂತ್ರಿ ಕಚೇರಿಯಿಂದ ಬಂದಿರುವ ಟಿಪ್ಪಣಿ ಕುರಿತು ಪಿಡಬ್ಲ್ಯುಡಿ ಸಚಿವರು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ತಾವೇ ಖುದ್ದು ಸಿಎಂ ಜತೆ ಚರ್ಚೆ ಮಾಡುತ್ತೇವೆಂದು ಟಿಪ್ಪಣಿಗೆ ಮಹತ್ವ ನೀಡಿಲ್ಲ ಎಂದು ತಿಳಿದುಬಂದಿದೆ.

    ಇದೇ ಪ್ರಕರಣ ಸಿಎಂ ಕಚೇರಿ ಗಮನಕ್ಕೂ ಬಂದಿದ್ದು, ಅಮಾನತು ವಾಪಸ್ ಪಡೆಯಬೇಕೆಂದು ಲೋಕೋಪಯೋಗಿ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಕಚೇರಿಗೆ ಮುಖ್ಯಮಂತ್ರಿ ಕಚೇರಿಯಿಂದ ಟಿಪ್ಪಣಿ ತಲುಪಿದೆ. ಅದರ ಆಧಾರದಲ್ಲಿ ಅಮಾನತು ಹಿಂಪಡೆಯಲು ಕಡತ ಸಿದ್ಧವಾದರೂ ಲೋಕೋಪಯೋಗಿ ಸಚಿವರ ಕಚೇರಿಯಿಂದ ಪ್ರಕ್ರಿಯೆಗೆ ತಡೆ ಒಡ್ಡಲಾಗಿದೆಎಂಬುದು ತಿಳಿದುಬಂದಿದೆ.ವಿಧಾನಸೌಧ ನಿರ್ವಹಣೆ ಕುರಿತು ಆಕ್ಷೇಪಣೆ ಬಂದ ಕೂಡಲೇ ಆಕ್ಷೇಪ ಎತ್ತಿದ ಸಂಗತಿಯನ್ನು ಸರಿಪಡಿಸಲಾಗಿದೆ. ಅಮಾನತುಗೊಳ್ಳಲು ಸಚಿವರ ಮನೆಗಳ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಪ್ರಮುಖ ನೆಪ.

    ಇದನ್ನೂ ಓದಿ: ವಿಶ್ವಗುರು: ಪಾಕ್​ ಆಕ್ರಮಿತ ಕಾಶ್ಮೀರ ಶಾಶ್ವತವಾಗಿ ಕೈತಪ್ಪಿ ಹೋಯ್ತಾ?!

    ಸಚಿವರ ಕಚೇರಿಯಲ್ಲಿರುವ ‘ಅನಧಿಕೃತ’ ಒಎಸ್​ಡಿ ಕೈವಾಡದ ಕಾರಣಕ್ಕೆ ಅಮಾನತು ಆದೇಶ ಹೊರಬಿದ್ದಿದ್ದು ಒಂದು ಕಡೆಯಾದರೆ, ಎಇಇ ಹುದ್ದೆಗೆ ಭಾರಿ ‘ಡಿಮಾಂಡ್’ ಇಡುವ ಮೂಲಕ ವ್ಯವಹಾರ ಕುದುರಿಸುವ ಪ್ರಯತ್ನ ನಡೆದಿದೆ ಎಂಬ ಮಾತು ಲೋಕೋಪಯೋಗಿ ಇಲಾಖೆಯಲ್ಲಿ ಕೇಳಿಬಂದಿದೆ. ವಿಧಾನಸೌಧ ತಳಮಹಡಿಯ ಕೊಠಡಿ ಸಂಖ್ಯೆ 13ರ (ಎಇಇ ಕಚೇರಿ) ಮೇಲೆ ಕಣ್ಣಿಟ್ಟಿರುವವರು ಪೈಪೋಟಿಗೆ ಇಳಿದಿದ್ದು, ಪ್ರತಿಷ್ಠೆಗಾಗಿ ಹೇಗಾದರೂ ಅವಕಾಶ ಗಿಟ್ಟಿಸಿ ಕೊಳ್ಳಬೇಕೆಂದು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ

    ತ್ಯಾಜ್ಯ ನೀರಿನಲ್ಲಿ ಕರೊನಾ ಹರಡಲ್ಲ, ಆದ್ರೂ ನಿರ್ಲಕ್ಷ್ಯ ಸಲ್ಲ; ಮುನ್ನೆಚ್ಚರಿಕಾ ಕ್ರಮಕ್ಕೆ ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts