More

    ಮಾ.1ರಿಂದ ದ್ವಿತೀಯ ಪಿಯು, ಮಾ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟಿಸಿದ ಪರೀಕ್ಷಾ ಮಂಡಳಿ

    ಬೆಂಗಳೂರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ 2023-24ನೇ ಸಾಲಿನ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.
    ಮಾ.1ರಿಂದ ಮಾ.22ರ ವರೆಗೆ ದ್ವಿತೀಯ ಪಿಯುಸಿ ಮತ್ತು ಮಾ.25ರಿಂದ ಏ.6ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

    ದ್ವಿತೀಯ ಪಿಯುಸಿ:

    ದ್ವಿತೀಯ ಪಿಯುಸಿ ಪರೀಕ್ಷೆಯು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆಗಳು ನಡೆಯಲಿದೆ. ಮಾ.1- ಕನ್ನಡ, ಅರೇಬಿಕ್, ಮಾ.4- ಗಣಿತ, ಶಿಕ್ಷಣಶಾಸ, ಸಂಖ್ಯಾಶಾಸ, ಮಾ.6- ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ನೆಸ್, ಮಾ.7- ಇತಿಹಾಸ, ಭೌತಶಾಸ, ಮಾ.9- ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ, ಮಾ-11- ತರ್ಕಶಾಸ, ವ್ಯವಹಾರ ಅಧ್ಯಯನ, ಮಾ.13- ಇಂಗ್ಲಿಷ್, ಮಾ.15- ಹಿಂದೂಸ್ತಾನಿ ಸಂಗೀತ, ಮನಃಶಾಸ, ರಸಾಯನಶಾಸ, ಮೂಲ ಗಣಿತ, ಮಾ.16- ಅರ್ಥಶಾಸ, ಮಾ.18- ಭೂಗೋಳಶಾಸ, ಜೀವಶಾಸ, ಮಾ.20- ಸಮಾಜಶಾಸ, ವಿದ್ಯುನ್ಮಾನಶಾಸ, ಗಣಕ ವಿಜ್ಞಾನ, ಮಾ.21- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ್ರೆಂಚ್, ಮಾ.22- ಹಿಂದಿ.

    ಎಸ್ಸೆಸ್ಸೆಲ್ಸಿ ವೇಳಾಪಟ್ಟಿ:

    ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ. ಪ್ರಥಮ ಭಾಷೆ 100 ಅಂಕಗಳಿಗೆ ಮತ್ತು ಉಳಿದ ವಿಷಯಗಳು 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪರೀಕ್ಷೆ ಬರೆಯಲು 3 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ, ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಬರೆಯಲು ಹಾಗೂ 15 ನಿಮಿಷ ನಿಗದಿ ಮಾಡಲಾಗಿದೆ.

    ಮಾ.25- ಪ್ರಥಮ ಭಾಷೆ ಕನ್ನಡ, ಮಾ.-27- ಸಮಾಜ ವಿಜ್ಞಾನ, ಮಾ.30 ವಿಜ್ಞಾನ, ರಾಜ್ಯಶಾಸ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ಸಂಗೀತ, ಏ.2- ಗಣಿತ, ಸಮಾಜ ಶಾಸ, ಏ.3- ಅರ್ಥಶಾಸ, ಏ.4 ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯೂಎ್ ವಿಷಯಗಳು, ಏ.6- ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಪರೀಕ್ಷೆಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts