More

    ರಾಮಾಯಣ ಯಾತ್ರೆ ಎರಡನೇ ರೈಲು ರದ್ದು: ಕಾರಣವಿದು..

    ನವದೆಹಲಿ: ರಾಮಾಯಣಕ್ಕೆ ಸಾಕ್ಷಿಯಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಸಲುವಾಗಿ ಇಂಡಿಯನ್ ರೈಲ್ವೇ ಕೇಟರಿಂಗ್​ ಆ್ಯಂಡ್ ಟೂರಿಸಂ ಕಾರ್ಪೋರೇಷನ್​ (ಐಆರ್​ಸಿಟಿಸಿ) ರಾಮಾಯಣ ಯಾತ್ರೆ ಎಂಬ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇದೀಗ ರಾಮಾಯಣ ಯಾತ್ರೆಯ ಎರಡನೇ ರೈಲನ್ನು ರದ್ದುಗೊಳಿಸಲಾಗಿದೆ.

    18 ದಿನಗಳ ಈ ರಾಮಾಯಣ ಯಾತ್ರೆಯನ್ನು ಐಆರ್​ಸಿಟಿಸಿ ಜೂ. 21ರಂದು ಆರಂಭಿಸಿತ್ತು. ಭಾರತ್ ಗೌರವ್ ಟೂರಿಸ್ಟ್ ಟ್ರೈನ್​ ಎಂಬ ವಿಶೇಷ ರೈಲಿನ ಮೂಲಕ ರಾಮಾಯಣದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವ ಈ ರೈಲು, 11 ಎಸಿ ಕೋಚ್​ಗಳಿಂದ ಕೂಡಿದ್ದು, 600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಪ್ರತಿ ಪ್ರಯಾಣಿಕರಿಗೆ 62 ಸಾವಿರ ರೂ. ಟಿಕೆಟ್ ಖರ್ಚು ತಗುಲುತ್ತದೆ.

    ವನವಾಸ ಸಂದರ್ಭದಲ್ಲಿ ರಾಮ, ಸೀತೆ, ಲಕ್ಷ್ಮಣ ಸಂಚರಿಸಿದ್ದ ಸ್ಥಳಗಳನ್ನು ಹದಿನೆಂಟು ದಿನಗಳಲ್ಲಿ ತೋರಿಸುವ ಈ ಪ್ರಯಾಣದಲ್ಲಿ ಅಯೋಧ್ಯೆ, ಜನಕಪುರ (ನೇಪಾಳ), ಬುಕ್ಸರ್, ವಾರಾಣಸಿ, ಪ್ರಯಾಗರಾಜ್, ಶ್ರಿಂಗ್ವೇರ್​ಪುರ್, ಚಿತ್ರಕೂಟ, ನಾಶಿಕ್, ಹಂಪಿ, ರಾಮೇಶ್ವರ, ಕಾಂಚೀಪುರಂ, ಭದ್ರಾಚಲಂ ಮುಂತಾದ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತದೆ.

    ಅಂದಹಾಗೆ ಇದರ ಎರಡನೇ ರಾಮಾಯಣ ಯಾತ್ರೆಯನ್ನು ಆ. 24ರಂದು ನಡೆಯಲಿದೆ ಎಂದಿದ್ದ ಐಆರ್​ಸಿಟಿಸಿ, ಇದೀಗ ಅದನ್ನು ರದ್ದುಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಪ್ರಯಾಣಿಕರ ಕೊರತೆ ಕಾರಣಕ್ಕೆ ರಾಮಾಯಣ ಯಾತ್ರೆಯ ಎರಡನೇ ರೈಲನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಹನ್ನೊಂದು ಊರಲ್ಲಿ 3 ದಿನಗಳಿಂದ ವಿದ್ಯುತ್ ಇಲ್ಲ!; ಕತ್ತಲಲ್ಲೇ ಕಾಲ ಕಳೆಯುತ್ತಿರುವ ಗ್ರಾಮಸ್ಥರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts