More

    ಬಿಸಿಲಿನ ತೀವ್ರತೆಗೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿದ್ದ ಮರಿ ಚೀತಾ ಮೃತ್ಯು!

    ಮಧ್ಯ ಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಚೀತಾದ ಎರಡನೇ ಮರಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ತೀವ್ರ ಬಿಸಿಲಿನಿಂದ ಚೀತಾದ ಮರಿಗಳು ಅಸ್ವಸ್ಥಗೊಂಡಿದ್ದವು. ತೀವ್ರ ನಿಗಾ ವಹಿಸಿ ರಕ್ಷಣೆ ನೀಡಲಾಗುತ್ತಿತ್ತು. ಇದೀಗ ಮೇಲ್ವಿಚಾರಣೆಯ ಸಂದರ್ಭದಲ್ಲಿ ಎರಡನೇ ಮರಿ ಸಾವನ್ನಪ್ಪಿರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.

    ಜ್ವಾಲಾ ಹೆಸರಿನ ಚೀತಾ ಕಳೆದ ಮಾರ್ಚ್ 24ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೊದಲ ಮರಿ ಎರಡು ದಿನಗಳ ಹಿಂದೆ(ಮೇ 23) ಸಾವನ್ನಪ್ಪಿದೆ.

    ಮಾರ್ಚ್‌ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್‌ನಲ್ಲಿ ಉದಯ್ ಎಂಬ ಚೀತಾ ಮರಣಹೊಂದಿತ್ತು. ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಈಗ ಮತ್ತೊಂದು ಚೀತಾ ಮೃತಪಟ್ಟಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ತಿಂಗಳಲ್ಲಿ ಚೀತಾಗಳು ಸಾವನ್ನಪ್ಪಿದ್ದು, ಈಗ ಒಂದು ಮರಿ ಸಹ ಸಾವನ್ನಪ್ಪಿದೆ. ಇದು ಅಧಿಕಾರಿಗಳಲ್ಲಿ ಆತಂಕವನ್ನುಂಟು ಮಾಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts