ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮರಿ ಚೀತಾ ಮೃತ್ಯು; 2 ತಿಂಗಳಲ್ಲಿ ನಾಲ್ಕನೇ ಸಾವು

ಮಧ್ಯಪ್ರದೇಶದ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಕುನೋ ಅರಣ್ಯಾಧಿಕಾರಿ ಪ್ರಕಾರ, ಮಾರ್ಚ್ 24ರಂದು ಕುನೊದಲ್ಲಿ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೇಲ್ವಿಚಾರಣೆಯ ಸಮಯದಲ್ಲಿ ಜ್ವಾಲಾ ಎಂಬ ಹೆಣ್ಣು ಮರಿ ಮೃತಪಟ್ಟಿರುವುದು ಗೊತ್ತಾಗಿದೆ. ಆದರೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನವಜಾತ ಮರಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅರಣ್ಯ ಇಲಾಖೆ ತಂಡ ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್​ ಅಧ್ಯಕ್ಷರಾಗಿ ಕನ್ನಡಿಗ … Continue reading ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮರಿ ಚೀತಾ ಮೃತ್ಯು; 2 ತಿಂಗಳಲ್ಲಿ ನಾಲ್ಕನೇ ಸಾವು