More

    117 ಕೆ.ಜಿ. ತೂಕ ಹೊಂದಿದ್ದ ಮಹಿಳೆಗೆ ಎರಡನೇ ಬಾರಿ ಯಶಸ್ವಿಯಾಗಿ ನಡೆದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

    ಬೆಂಗಳೂರು: 117 ಕಿಲೋಗ್ರಾಮ್​ ತೂಕ ಹೊಂದಿದ್ದ 50 ವರ್ಷದ ಮಹಿಳೆಗೆ ಫೋರ್ಟಿಸ್​ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಬೊಜ್ಜು ಕರಗಿಸುವ ಮರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಲ್ಯಾಪರೋಸ್ಕೊಪಿ ಹಿರಿಯ ಸಲಹೆಗಾರ, ಬೇರಿಯಾಟ್ರಿಕ್ ಸರ್ಜನ್ ಡಾ. ಗಣೇಶ್ ಶೆಣೈ ಅವರ ತಂಡವು 117 ತೂಕ ಹೊಂದಿದ್ದ ಮಹಿಳೆಗೆ ಮರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದೆ.

    50 ವರ್ಷದ ಮಹಿಳೆಯು 8 ವರ್ಷಗಳ ಹಿಂದೆಯೇ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು 114 ಕೆ.ಜಿ. ತೂಕ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರು ಬರೋಬ್ಬರಿ 25 ಕೆ.ಜಿ. ತೂಕ ಇಳಿಸಿಕೊಂಡಿದ್ದರು. ಆದರೆ, ಒಂದು ವರ್ಷದೊಳಗಾಗಿ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುವಿಕೆಯಿಂದಾಗಿ 117 ಕೆ.ಜಿ. ತೂಕಕ್ಕೆ ಬಂದು ನಿಂತರು. ಇದು ಅತ್ಯಂತ ಅಪಾಯಕಾರಿ ಎಂದು ಡಾ. ಗಣೇಶ್ ಶೆಣೈ ಹೇಳುತ್ತಾರೆ.

    ಈ ಮಹಿಳೆ ಮೊದಲು ಮಾಡಿಸಿಕೊಂಡಿದ್ದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆರೆದ ಅಪೆಂಡೆಕ್ಟಮಿ ಸೇರಿ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಹ ಹೊಂದಿದ್ದರು. ಈ ಎಲ್ಲದರ ಪರಿಣಾಮ ಅವರ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುತ್ತ ಹೋಯಿತು. ಅವರು ಎಷ್ಟೇ ಡಯೆಟ್ ಹಾಗೂ ವ್ಯಾಯಾಮ ಮಾಡಿದರೂ ಅವರ ಬೊಜ್ಜು ಬೆಳೆಯುತ್ತ ಒಂದು ವರ್ಷದೊಳಗೆ 117 ಕೆ.ಜಿ.ಗೆ ಬಂದು ನಿಂತಿತು.

    117 ಕೆ.ಜಿ. ತೂಕ ಹೊಂದಿದ್ದ ಮಹಿಳೆಗೆ ಎರಡನೇ ಬಾರಿ ಯಶಸ್ವಿಯಾಗಿ ನಡೆದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

    ನಮ್ಮ ತಂಡವು ಅವರ ಅಷ್ಟೂ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅವರಿಗೆ ಲ್ಯಾಪರೋಸ್ಕೋಪಿಕ್ ಮರು ಸ್ಲೀವ್ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. ಈ ಎಲ್ಲದರ ಪ್ರಯತ್ನದಿಂದಾಗಿ ಮತ್ತೊಮ್ಮೆ ಮಹಿಳೆಗೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಬಾರಿ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಅವರ ತೂಕ ಕ್ರಮೇಣ ಕಡಿಮೆಯಾಗಲಿದೆ ಎಂದು ಹೇಳಿದರು.

    ಇದು ಹಾಟೆಸ್ಟ್ ಸೀರೆ!; ಇದನ್ನು ಬೆಂಕಿಪೊಟ್ಟಣದೊಳಗಿಟ್ಟು ಒಯ್ಯಬಹುದು..!

    ಹಿನ್ನಡೆಯಲ್ಲಿದ್ದ ಕಾಫಿ ಡೇಗೆ ಮುನ್ನಡೆ; ಕಂಪನಿಯ ಸಾಲದ ಹೊರೆ ತಗ್ಗಿಸಿದರು ಸಿದ್ಧಾರ್ಥರ ಪತ್ನಿ ಮಾಳವಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts