More

    ಆಸನವಿಲ್ಲದ ಗುತ್ತಲ ಬಸ್ ನಿಲ್ದಾಣ

    ಗುತ್ತಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವ ಆಸನಗಳನ್ನು ನಿರ್ವಿುಸದ ಗುತ್ತಿಗೆದಾರನ ನಿರ್ಲಕ್ಷ್ಯಂದಾಗಿ ಪ್ರಯಾಣಿಕರು ನಿಲ್ದಾಣದ ಪಕ್ಕ ನೆಲದ ಮೇಲೆ ಕುಳಿತುಕೊಳ್ಳುವ ಪ್ರಸಂಗ ಎದುರಾಗಿದೆ.

    ಕಳೆದ 4-5 ತಿಂಗಳ ಹಿಂದೆ ಬಸ್ ನಿಲ್ದಾಣದ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿತ್ತು. ನಿಲ್ದಾಣದ ಹೊರಗಡೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಆಸನಗಳನ್ನು ನಿರ್ವಿುಸಬೇಕಿತ್ತು. ಆದರೆ, ಗುತ್ತಿಗೆದಾರರು ಅಂತಿಮ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ತೆರಳಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

    ಬಸ್ ನಿಲ್ದಾಣದ ಒಳಗಡೆ ಇರುವ ಕ್ಯಾಂಟೀನ್ ಮುಂಭಾಗದಲ್ಲಿ ಎಂ. ಸ್ಯಾಂಡ್ (ಕೃತಕ ಮರಳು) ಹಾಗೇ ಇದೆ. ಅಲ್ಲಿ ಕಲುಷಿತ ವಾತಾವರಣ ನಿರ್ವಣವಾಗಿದ್ದು, ನಿಲ್ದಾಣದ ಸುತ್ತಲೂ ಶುಚಿತ್ವ ಕಣ್ಮರೆಯಾಗಿದೆ. ನೂತನವಾಗಿ ಶೌಚಗೃಹ ನಿರ್ಮಾಣ ಮಾಡಲಾಗಿದ್ದು, ಇದರ ಪಕ್ಕದಲ್ಲಿನ ಸ್ಥಳ ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಶೌಚಗೃಹ ಇದ್ದೂ ಇಲ್ಲದಂತಾಗಿದೆ. ಅಲ್ಲದೆ, ಮುಖ್ಯವಾಗಿ ಮಹಿಳೆಯರ ವಿಶ್ರಾಂತಿ ಗೃಹದಲ್ಲಿ ನಿಲ್ದಾಣದ ಅಧಿಕಾರಿಗಳು ವಿವಿಧ ವಸ್ತುಗಳನ್ನು ಇಟ್ಟು ಕೀಲಿಹಾಗಿದ್ದಾರೆ.

    ನಿಲ್ದಾಣದಲ್ಲಿ ಸಾಲು ಸಾಲಾಗಿ ಆಸನದ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗುತ್ತಿಗೆದಾರ ಕೆಲಸ ಮುಗಿಸಿ 8-10 ತಿಂಗಳಾದರೂ ಇಲ್ಲಿಯವರೆಗೂ ಆಸನಗಳನ್ನು ನಿರ್ವಿುಸುವಂತೆ ಕ್ರಮ ಗೊಂಡಿಲ್ಲ.

    ಮುಖ್ಯವಾಗಿ ಹೊರಗಡೆ ಆಸನಗಳನ್ನು ವ್ಯವಸ್ಥೆ ಮಾಡಿ ಮೇಲ್ಛಾವಣಿ ನಿರ್ವಿುಸಬೇಕಿದೆ. ಅಲ್ಲದೆ, ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ನಿಲ್ದಾಣಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ನಿಲ್ದಾಣದ ಪಾದಚಾರಿ ಸ್ಥಳದಲ್ಲಿಯೇ ಪ್ರಯಾಣಿಕರು ಬಿಸಿಲನ್ನು ಲೆಕ್ಕಿಸದೇ ಕುಳಿತುಕೊಳ್ಳುತ್ತಿದ್ದಾರೆ. ಸಾರಿಗೆ ವಿಭಾಗೀಯ ನಿಯಂತ್ರಕರು ಕೂಡಲೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು.

    | ಹನುಮಂತ ಅಗಸಿಬಾಗಿಲದ, ಗುತ್ತಲ

    ಬಸ್ ನಿಲ್ದಾಣದಲ್ಲಿನ ಆಸನಗಳ ವ್ಯವಸ್ಥೆಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಈ ಕಾರಣಕ್ಕಾಗಿ ಅವರ ಬಿಲ್​ನ್ನು ತಡೆ ಹಿಡಿಯಲಾಗಿದೆ. ಆದಷ್ಟು ಬೇಗ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಲಾಗುವುದು.

    | ವಿ.ಎಸ್. ಜಗದೀಶ, ವಿಭಾಗೀಯ ನಿಯಂತ್ರಕರು, ವಾಕರಸಾಸಂ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts