More

    ನಮೋ ಉಚಿತ ಕ್ಯಾಂಟೀನ್‌ಗೆ ಹತ್ತರ ಸಂಭ್ರಮ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಕುಂಬ್ಡಾಜೆ ಪಂಚಾಯಿತಿಯ ಉಪ್ಪಂಗಳ ನಿವಾಸಿ ‘ಉಪ್ಪಂಗಳ ಕುಟ್ಯಣ್ಣ’ ಎಂದೇ ಪರಿಚಿತರಾಗಿರುವ ವೆಂಕಟ್ರಮಣ ಭಟ್ ಅವರು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಅಗಲ್ಪಾಡಿ ಜಾತ್ರಾ ಮಹೋತ್ಸವ ಸಂದರ್ಭ ನಡೆಸುತ್ತಿರುವ ಉಚಿತ ಹೋಟೆಲ್ ಸೇವೆಯನ್ನು ಈ ಬಾರಿಯೂ ಮುಂದುವರಿಸಿದ್ದಾರೆ.

    ವೆಂಕಟ್ರಮಣ ಭಟ್ ಅವರು ಅಪ್ಪಟ ಮೋದಿ ಅಭಿಮಾನಿ. ಹತ್ತು ವರ್ಷಗಳ ಹಿಂದೆ ಚಾಯ್‌ವಾಲಾ ಮೋದಿ ಪ್ರಧಾನಿಯಾಗಿ ದೇಶದ ಗದ್ದುಗೆ ಹಿಡಿದ ನೆನಪಿಗೆ ವೆಂಕಟ್ರಮಣ ಭಟ್ ಅವರು ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ತಮ್ಮ ಉಚಿತ ಹೋಟೆಲ್ ಸೇವೆ ಆರಂಭಿಸಿದ್ದಾರೆ. ನಂತರದ ವರ್ಷಗಳಲ್ಲಿ ಅದನ್ನು ನಿರಂತರ ಮುಂದುವರಿಸಿಕೊಂಡು ಬಂದಿರುವ ಅವರ ಸೇವೆ ಹತ್ತನೇ ವರ್ಷಕ್ಕೆ ಕಾಲಿರಿಸಿದೆ.

    ದೇವಸ್ಥಾನದ ಮೂರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಹೋಟೆಲ್ ಸೇವೆ ನಡೆಸುವ ಅವರು, ಹೋಟೆಲ್‌ಗೆ ಆಗಮಿಸುವ ಗ್ರಾಹಕರಿಗೆ ಉಚಿತವಾಗಿ ಚಾ, ತಿಂಡಿ ವಿತರಿಸುತ್ತಾರೆ. ಗ್ರಾಹಕರು ಹಣ ನೀಡಲು ಮುಂದಾದರೆ ಸ್ವೀಕರಿಸದೆ, ಸನಿಹದಲ್ಲಿರಿಸಿದ ಪೆಟ್ಟಿಗೆಗೆ ಹಾಕುವಂತೆ ತಿಳಿಸುತ್ತಾರೆ. ಹಣ ನೀಡದಿದ್ದರೂ, ಅವರ ಉಚಿತ ಸೇವೆ ನಿರಂತರ ಮುಂದುವರಿಯುತ್ತದೆ. ಉಪ್ಪಂಗಳ ಕುಟ್ಯಣ್ಣನ ಹೋಟೆಲ್‌ನಲ್ಲಿ ಆಹಾರಕ್ಕೆ ಬೆಲೆ ನಿಗದಿಯಿಲ್ಲ. ಎಷ್ಟು ಬೇಕಾದರೂ ಸೇವಿಸಬಹುದು. ಕೆಲವರು ಆಹಾರ ಸೇವಿಸಿ ತಮಗೆ ತೋಚಿದಷ್ಟು ಹಣವನ್ನು ಪಾತ್ರೆಯಲ್ಲಿ ಹಾಕಿ ತೆರಳುತ್ತಾರೆ. ಲಾಭ, ನಷ್ಟದ ಲೆಕ್ಕಾಚಾರ ನೋಡದೆ, ಮೂರು ದಿನಗಳ ಕಾಲ ಉಚಿತ ಕ್ಯಾಂಟಿನ್ ಸೇವೆ ನಡೆಸುತ್ತಿದ್ದಾರೆ.

    ನಾರಂಪಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವೆಂಕಟ್ರಮಣ ಭಟ್ ಅವರು ಕಳೆದ ಒಂದೂವರೆ ವರ್ಷದಿಂದ ಹನುಮಗಿರಿ ಕ್ಷೇತ್ರದಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದಾರೆ. ಊರಿನ ಜಾತ್ರೆಗೆ ತಪ್ಪದೆ ಆಗಮಿಸುವ ಅವರು, ಮೂರು ದಿನಗಳ ಕಾಲ ಉಚಿತ ಹೋಟೆಲ್ ಸೇವೆ ನಡೆಸುತ್ತಿದ್ದಾರೆ.

    ದೇವಿಯ ದಯೆಯಿಂದ ಇದು ಚೆನ್ನಾಗಿ ನಡೆಯುತ್ತದೆ. ನನಗಂತೂ ನಷ್ಟವಾಗಿಲ್ಲ. ಆರಂಭದ ವರ್ಷದಲ್ಲಿ 50 ಸಾವಿರ ರೂ. ಖರ್ಚು ಮಾಡಿ ಉಚಿತ ಹೋಟೆಲ್ ಸೇವೆ ನಡೆಸಿದ್ದು, ಒಂದಷ್ಟು ನಷ್ಟ ಅನುಭವಿಸಿದ್ದರೂ, ನಂತರದ ವರ್ಷಗಳಲ್ಲಿ ಅದನ್ನು ಸರಿದೂಗಿಸಲಾಗಿದೆ. ಗ್ರಾಹಕರಲ್ಲಿನ ಸಂತೃಪ್ತಿ ಉಚಿತ ಕ್ಯಾಂಟೀನ್ ಸೇವೆಗೆ ತನ್ನನ್ನು ಪ್ರೇರೇಪಿಸಿದೆ.
    -ವೆಂಕಟ್ರಮಣ ಭಟ್(ಉಪ್ಪಂಗ ಕುಟ್ಯಣ್ಣ)
    ಉಚಿತ ಕ್ಯಾಂಟಿನ್ ಸೇವೆಯ ರುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts