More

    ಒಂದು ಹುಚ್ಚುನಾಯಿಗಾಗಿ ಶುರುವಾಗಿದೆ ಈ ಊರಲ್ಲಿ ಹುಡುಕಾಟ!

    ಹಾವೇರಿ: ಒಂದೇ ಒಂದು ಹುಚ್ಚುನಾಯಿಗಾಗಿ ಈ ಊರಲ್ಲಿ ಈಗ ಹುಡುಕಾಟ ಶುರುವಾಗಿದೆ. ಇಲ್ಲಿನ ಸಾರ್ವಜನಿಕರು ಅದನ್ನು ಆದಷ್ಟೂ ಬೇಗ ಪತ್ತೆ ಮಾಡಿ ಸೆರೆ ಹಿಡಿಯಲು ಒತ್ತಾಯಿಸಿದ್ದರೆ, ಅಕ್ಕಪಕ್ಕದ ಊರುಗಳ ಜನರು ಎಲ್ಲಿ ತಮ್ಮ ಗ್ರಾಮದತ್ತ ಬಂದು ಹಾವಳಿ ಇಡುವುದೋ ಎಂದು ಆತಂಕಗೊಂಡಿದ್ದಾರೆ.

    ಹಾವೇರಿ ಜಿಲ್ಲೆಯ ಹಾನಗಲ್​ ಪುರಸಭೆಯವರು ಇದೀಗ ಹುಚ್ಚುನಾಯಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ. ಹಾನಗಲ್​ ಪಟ್ಟಣದ ಕಮಾಟಗೇರಿ ಮತ್ತು ಕಲ್ಲುಹಕ್ಕಲಿನಲ್ಲಿ ಸುಮಾರು 20 ಮಂದಿಗೆ ಹುಚ್ಚುನಾಯಿ ಕಚ್ಚಿ ಪರಾರಿ ಆಗಿರುವುದೇ ಈ ಹುಡುಕಾಟಕ್ಕೆ ಕಾರಣ. ಇದು ಸಾರ್ವಜನಿಕರಿಗಷ್ಟೇ ಅಲ್ಲ, ಹಸು-ಎಮ್ಮೆ ಮುಂತಾದ ಸಾಕುಪ್ರಾಣಿಗಳಿಗೂ ಕಚ್ಚಿ ಗಾಯಗೊಳಿಸಿದೆ.

    ಆಟವಾಡುತ್ತಿದ್ದ ಮಕ್ಕಳು, ಅಜ್ಜ-ಅಜ್ಜಿ ಎನ್ನದೆ ಅಬಾಲವೃದ್ಧರಾಗಿ 20ಕ್ಕೂ ಅಧಿಕ ಮಂದಿಗೆ ಈ ಹುಚ್ಚುನಾಯಿ ಕಚ್ಚಿದೆ. ಗಾಯಾಳುಗಳನ್ನು ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಶಿ ಎಂಬ ಗ್ರಾಮದ ಕಡೆಯಿಂದ ಈ ಹುಚ್ಚುನಾಯಿ ಬಂದಿದೆ ಎಂದು ಅಂದಾಜಿಸಲಾಗಿದ್ದು, ಸದ್ಯಕ್ಕೆ ಅದು ನಾಪತ್ತೆಯಾಗಿದೆ. ಸುಮ್ಮನೆ ಬಿಟ್ಟರೆ ಅದು ಮತ್ತಷ್ಟು ಜನರಿಗೆ ಕಚ್ಚುವ ಸಾಧ್ಯತೆ ಇರುವುದರಿಂದ ತಕ್ಷಣ ಹುಡುಕಿ ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಕಾರುಗಳು ಪರಸ್ಪರ ಡಿಕ್ಕಿ, ಸಂಪೂರ್ಣ ಜಖಂ; ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವು..

    ಕಾರ್ಮಿಕರಿಗೆ ಬೇಸರದ ಸಂಗತಿ: ಇಪಿಎಫ್​ಗೆ 40 ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts