More

    ಮಹಿಳೆಯರ ಏಕೈಕ ಟೆಸ್ಟ್‌ನಲ್ಲಿ ಆಸೀಸ್‌ಗೆ ಕಡಿವಾಣ: ಮೊದಲ ದಿನವೇ ಭಾರತ ಮೇಲುಗೈ

    ಮುಂಬೈ: ಪೂಜಾ ವಸಾಕರ್ (53ಕ್ಕೆ 4) ಮಾರಕ ದಾಳಿ ಹಾಗೂ ಸ್ನೇಹಾ ರಾಣಾ (56ಕ್ಕೆ3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಆತಿಥೇಯ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ.

    ವಾಂಖೆಡೆಯಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸೀಸ್, ತಾಲಿಹಾ ಮೆಕ್‌ಗ್ರಾತ್ (50 ರನ್, 56 ಎಸೆತ, 8 ಬೌಂಡರಿ) ಅರ್ಧಶತಕದ ಹೋರಾಟದ ನಡುವೆ 77.4 ಓವರ್‌ಗಳಲ್ಲಿ 219 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಕ್ತಾಯಗೊಳಿಸಿತು. ಪ್ರತಿಯಾಗಿ ಉಪನಾಯಕಿ ಸ್ಮತಿ ಮಂದನಾ (43*) ಹಾಗೂ ಶೆಾಲಿ ವರ್ಮ (40) ಮೊದಲ ವಿಕೆಟ್‌ಗೆ ಒದಗಿಸಿದ ಬಿರುಸಿನ ಆರಂಭದಿಂದ ಭಾರತ ದಿನದಂತ್ಯಕ್ಕೆ 19 ಓವರ್‌ಗಳಲ್ಲಿ 1 ವಿಕೆಟ್‌ಗೆ 98 ರನ್‌ಗಳಿಸಿದ್ದು, ಇನ್ನೂ 121 ರನ್ ಹಿನ್ನಡೆಯಲ್ಲಿದೆ. ಸ್ಮತಿ ಜತೆ ಸ್ನೇಹಾ (4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219 (ಬೆಥ್ ಮೂನಿ 40, ಎಲ್ಲಿಸ್ 4, ತಾಲಿಹಾ 50, ಅಲಿಸಾ ಹೀಲಿ 38, ಜೊನಾಸೆನ್ 19, ಗಾರ್ಥ್ 28*, ಪೂಜಾ 53ಕ್ಕೆ4, ಸ್ನೇಹಾ 56ಕ್ಕೆ3, ದೀಪ್ತಿ 45ಕ್ಕೆ 2). ಭಾರತ: 19 ಓವರ್‌ಗಳಲ್ಲಿ 1 ವಿಕೆಟ್‌ಗೆ 98 (ಸ್ಮತಿ 43*, ಶೆಾಲಿ 40, ಜೋನಾಸೆನ್ 4ಕ್ಕೆ 1).

    ರಿಚಾಗೆ ಚೊಚ್ಚಲ ಟೆಸ್ಟ್
    ವರ್ಷದ ಆರಂಭದಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಕಿರಿಯರ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ೋಷ್ ರಾಷ್ಟ್ರೀಯ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಕನ್ನಡತಿ ಶುಭಾ ಸತೀಶ್ ಬದಲಿಗೆ ರಿಚಾ ಅವಕಾಶ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts