More

    ರತ್ನಾಪುರ ಗ್ರಾಮ ಸಂಪುರ್ಣ ಸೀಲ್‌ಡೌನ್

    ತಿಕೋಟಾ: ತಾಲೂಕಿನ ರತ್ನಾಪುರ ಗ್ರಾಮದ ವ್ಯಕ್ತಿ ಕರೊನಾ ವರದಿ ಬರುವ ಮುನ್ನ ಸಾವನ್ನಪಿರುವ ಹಿನ್ನ್ನೆಲೆಯಲ್ಲಿ ಗ್ರಾಮವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್‌ಡೌನ್ ಮಾಡಿದೆ.
    ವಿಜಯಪುರ ನಗರದಲ್ಲಿ ಕಂಡು ಬಂದ ಕರೊನಾ ಈಗ ಗ್ರಾಮೀಣ ಪ್ರದೇಶಕ್ಕೂ ಬಂದಿರುವುದರಿಂದ ಹಳ್ಳಿಗರು ಭಯಭೀತರಾಗಿದ್ದಾರೆ. ಗ್ರಾಮದ ನಾಲ್ಕು ದಿಕ್ಕಿಗೂ 1 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಿ, ಜನಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
    ತಹಸೀಲ್ದಾರ್ ಎಸ್.ಎಂ. ಮ್ಯಾಗೇರಿ ನೇತೃತ್ವದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಯಲ್ಲಿ ತೊಡಿಗಿದ್ದಾರೆ. ಜನರಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಅಂಥವರನ್ನು ಹೋಮ್ ಕ್ವಾರಂಟೈನ್‌ಗೊಳಪಡಿಸಿ, ಶಂಕಿತರ ಗಂಟಲು ದ್ರವ ಪರೀಕ್ಷೆ ಕಳುಹಿಸುತ್ತಿದ್ದಾರೆ. ಗ್ರಾಪಂದಿಂದ ಸೋಂಕು ನಿವಾರಣೆ ಔಷಧ ಸಿಂಪಡನೆ ಮಾಡಲಾಗುತ್ತಿದೆ. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ರತ್ನಾಪುರ ಗ್ರಾಮ ಸಂಪುರ್ಣ ಸೀಲ್‌ಡೌನ್
    ರತ್ನಾಪುರ ಗ್ರಾಮ ಸಂಪುರ್ಣ ಸೀಲ್‌ಡೌನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts