ಕುಂದಾಪುರ: ಆಮೆ ಬಾರ್‌ಗೆ ಬಂತು! ಎಣ್ಣೆ ಹಾಕುವುದಕ್ಕೆ ಅಲ್ಲ, ಹೆರಿಗೆಗಾಗಿ! ಗ್ರಾಹಕರ ಟೇಬಲ್ ಅಡಿ ನಿರ್ಭಯವಾಗಿ ನುಸುಳಿ ರೆಕ್ಕೆ, ಹಿಂಗಾಲಲ್ಲಿ ಮರಳು ಬಗೆದು, ಹೊಂಡವೆಬ್ಬಿಸಿ ನೂರಾರು ಮೊಟ್ಟೆಯಿಟ್ಟು ಸಮುದ್ರದಲ್ಲಿ ಮರೆಯಾಗಿದೆ.
ಇಂಥದ್ದೊಂದು ಅಚ್ಚರಿಗೆ ಶುಕ್ರವಾರ ರಾತ್ರಿ ಸಾಕ್ಷಿಯಾದ ತಾಣ ಕುಂದಾಪುರ ಕೋಡಿ ಕಡಲ ಕಿನಾರೆಯ ಬಾರ್ ಆ್ಯಂಡ್ ರೆಸ್ಟೋರೆಂಟ್, ಕೋಡಿ ಬೀಚ್‌ನಲ್ಲಿರುವ ಬಾರ್‌ನ ಹೊರಗೆ ಮರಳಿನ ಮೇಲೆ ಛತ್ರಿ ಸಹಿತ ಟೇಬಲ್ ಹಾಕಲಾಗುತ್ತದೆ. ಇಲ್ಲಿಗೆ ಯಾವುದೇ ಹಿಂಜರಿಕೆ ಇಲ್ಲದೆ ಬಂದ ಆಮೆ, ತೂರಿಕೊಂಡು ಗ್ರಾಹಕರಿದ್ದ ಟೇಬಲ್‌ನ ಕೆಳಗೆ ಮರಳು ಒಗೆಯಲಾರಂಭಿಸಿದೆ. ಟೇಬಲ್ ಬಳಿ ಕುಳಿತವರು ಎದ್ದಿದ್ದು, ಬಳಿಕ ಆಮೆ ಮೊಟ್ಟೆ ಇಟ್ಟಿದೆ. ಆಮೆಗೆ ಯಾವುದೇ ತೊಂದರೆ ಮಾಡದೆ ಸಹಕಾರ ನೀಡಿದ ಬಾರ್ ಮಾಲೀಕ ಶಶಿಧರ ಶೆಟ್ಟಿ, ಅರಣ್ಯ ಹಾಗೂ ಎಸ್‌ಎಫ್‌ಎಲ್ ಸಂಸ್ಥೆ ಸದಸ್ಯರಿಗೆ ನೀಡಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!
ಸ್ಥಳಕ್ಕೆ ಆಗಮಿಸಿದ ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಮೆ ಮೊಟ್ಟೆಯಿಟ್ಟ ಜಾಗದಲ್ಲಿ ಹ್ಯಾಚರಿ ಮಾಡಿ ರಕ್ಷಿಸಿದ್ದಾರೆ. ಮೊಟ್ಟೆಯಿಟ್ಟ ಜಾಗದಿಂದ ಸ್ಥಳಾಂತರಿಸಿದರೆ ಮೊಟ್ಟೆಗಳು ಹಾಳಾಗುವ ಅಪಾಯವಿದೆ. ಆಮೆ ಮೊಟ್ಟೆ ಇಡುವ ಮುನ್ನ ಅದರ ರಕ್ಷಣೆಗಾಗಿಯೇ ಜೆಲ್ ಸುರಿಸುವುದರಿಂದ ಹುಳು ಹುಪ್ಪಟೆಗಳು ಹತ್ತಿರ ಬರುವುದಿಲ್ಲ.
ಇದನ್ನೂ ಓದಿ: ಕೆಐಎಡಿಬಿ ಅಧಿಕಾರಿಗಳಿಂದ 85 ಲಕ್ಷ ರೂ. ವಂಚನೆ?; ನಕಲಿ ವಾರಸುದಾರರ ಸೃಷ್ಟಿಸಿ ಪರಿಹಾರ ಮಂಜೂರು ಆರೋಪ, ಕೇಸ್
ಬಾರ್ ಸಮೀಪ ಆಮೆ ಮೊಟ್ಟೆ ಇಡುವುದಕ್ಕೂ ಮುನ್ನ ಎರಡು ಕಡೆ ಮೊಟ್ಟೆಯಿಡುವ ಪ್ರಯತ್ನ ಮಾಡಿತ್ತು. ಬೀದಿ ನಾಯಿಗಳ ಹಾವಳಿಯಿಂದ ಸಾಧ್ಯವಾಗಿರಲಿಲ್ಲ. ಇದು ಕೋಡಿ ಕಡಲ ತೀರದಲ್ಲಿ ನಡೆದ ಆಮೆಗಳ 20ನೇ ಹೆರಿಗೆ, ಆಮೆ ಮೊಟ್ಟೆಯಿಟ್ಟ ದಿನ ರಕ್ಷಣೆ ಮಾಡಿದ ಮೊಟ್ಟೆಯಿಂದ ಮರಿ ಬಂದಿದ್ದು, 75 ಮರಿಗಳನ್ನು ಸಮುದ್ರಕ್ಕೆ ಸೇರಿಸಲಾಗಿದೆ. ಎಫ್‌ಎಸ್‌ಎಲ್ ಕೋ-ಆರ್ಡಿನೇಟರ್ ದಿನೇಶ್ ಸಾರಂಗ, ಆಮೆ ಮೊಟ್ಟೆ ಸಂರಕ್ಷಕ ಬಾಬು ಮೊಗವೀರ, ನಾಗರಾಜ್, ಸಿದ್ದ, ನರಸಿಂಹ ಪೂಜಾರಿ, ರಾಮದಾಸ ಖಾರ್ವಿ, ರಂಜಿತ್ ಪೂಜಾರಿ ಮತ್ತಿತರರು ಇದ್ದರು.
ಗಂಡ ಶಾಪಿಂಗ್ಗೆ ಹಣ ಕೊಟ್ಟಿಲ್ಲ ಅಂತ ಲವರ್ನ ಕರೆಸಿ ಹೊಡೆಸಿದ ಹೆಂಡತಿ!