More

    ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್‌ನ್ಯಾಶನಲ್ ಶಾಲಾ ವಾರ್ಷಿಕೋತ್ಸವ

    ಮಂಗಳೂರು: ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್‌ನ್ಯಾಶನಲ್ ವಿದ್ಯಾಸಂಸ್ಥೆ ಇದರ ಮೊದಲನೇ ವಾರ್ಷಿಕೋತ್ಸವ ಸಮಾರಂಭವು ಶುಕ್ರವಾರ ನಡೆಯಿತು. ಮನೋವೈದ್ಯೆ ಡಾ. ಕೃತಿಶ್ರೀ ಸೋಮಣ್ಣ ಮಾತನಾಡಿ, ಮಗು ಏನಾಗಬೇಕೆಂದು ನಿರ್ದೇಶಿಸುವುದಲ್ಲ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ಉತ್ತಮ ಮೌಲ್ಯಗಳನ್ನು ನೀಡಬೇಕು ಎಂದರು.ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಡಾ. ರಜನಿಶ್ ಸೊರಕೆ ಮಾತನಾಡಿ, ಈ ಶಾಲೆ ಒಂದು ವರ್ಷ ಪೂರೈಸುತ್ತಿರುವುದು ನಮಗೆಲ್ಲರಿಗೂ ಭಾವನಾತ್ಮಕ ಕ್ಷಣವಾಗಿದೆ.ವಿದ್ಯಾರ್ಥಿಗಳು ನಿಜವಾಗಿಯೂ ಉತ್ತಮ ಸಾಧನೆ ಮಾಡಿ ಈ ಸಂಸ್ಥೆಗೆ ಗೌರವ ತಂದಿದ್ದಾರೆ.ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದರು.ಶಾಲಾ ಆಡಳಿತ ಮಂಡಳಿಯ ಅಧಿಕಾರಿ ಯು.ಕೆ.ಖಾಲಿದ್ ಹಾಗೂ ಎಸ್. ಸಿ.ಎಸ್ ವಿದ್ಯಾಸಂಸ್ಥೆಯ ಎಲ್ಲಾ ಪ್ರಾಂಶುಪಾಲರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
    ವಿದ್ಯಾರ್ಥಿ ರಿಯಾನ್ ರಾಜ್ ಮತ್ತು ದಿಯಾ ಪೂಜಾರಿ ಸ್ವಾಗತಿಸಿದರು. ಪ್ರಗತಿಪರ ವಾರ್ಷಿಕ ವರದಿಯನ್ನು ಎಸ್.ಸಿ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ಹೆಲೆನ್ ಲೋಬೊ ಮಂಡಿಸಿದರು. ವಿದ್ಯಾರ್ಥಿನಿ ಅಂಜಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts