More

    ಶಬರಿಮಲೆಗೆ ಮಹಿಳೆಯರ ಪ್ರವೇಶ| ಜನವರಿ 13ರಿಂದ ಸುಪ್ರೀಂ ಕೋರ್ಟ್​ 9 ಸದಸ್ಯಪೀಠದಲ್ಲಿ ವಿಚಾರಣೆ

    ನವದೆಹಲಿ: ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ಜನವರಿ 13ರಿಂದ ನಡೆಯಲಿದೆ. ಒಂಭತ್ತು ಸದಸ್ಯ ಪೀಠ ಇದರ ವಿಚಾರಣೆ ನಡೆಸಲಿದೆ.

    ಶಬರಿಮಲೆಯ ಈ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠದಲ್ಲಿ ನಡೆಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ 13ರಂದು ಹೇಳಿತ್ತು. ಇದೇ ವೇಳೆ ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಈ ವಿಷಯವಾಗಿ ನಿರ್ದೇಶನ ನೀಡಲು ನಿರಾಕರಿಸಿತ್ತು. ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಮಾಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆ ಇಬ್ಬರು ಆ್ಯಕ್ಟಿವಿಸ್ಟ್​ಗಳು ಕೋರಿದ್ದರು.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್​ ಎ ಬೊಬ್ಡೆ ಈ ಹಿಂದೆ ಆಬ್ಸರ್ವೇಷನ್​ನಲ್ಲಿ ಬಹಳ ಸೂಕ್ಷ್ಮವಾದ ಭಾವನಾತ್ಮಕ ವಿಚಾರವಾಗಿದೆ. ಇದನ್ನು ಕೆರಳಿಸುವ ಪ್ರಯತ್ನ ಮಾಡಲಾಗದು ಎಂದು ಹೇಳಿದ್ದರು. ಮನವೊಲಿಸುವ ಸಮತೋಲನದ ಪ್ರಯತ್ನ ಇಲ್ಲಾಗಬೇಕಿದ್ದು, ಈಗಾಗಲೇ 7 ಸದಸ್ಯ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ ಎಂದಿದ್ದರು.

    ಈ ಹಿಂದಿನ ಸಿಜೆಐ ರಂಜನ್ ಗೊಗೋಯ್​ ಅವರ ನೇತೃತ್ವದ ಪಂಚ ಸದಸ್ಯ ಪೀಠ ಕಳೆದ ನವೆಂಬರ್​ನಲ್ಲಿ 3:2ರ ಅಭಿಮತದ ತೀರ್ಪನ್ನು ಈ ವಿಚಾರವಾಗಿ ಕೊಟ್ಟಿತ್ತು. ಅಲ್ಲದೆ, 2018ರ ಐತಿಹಾಸಿಕ ತೀರ್ಪನ ಪರಾಮರ್ಶೆಯನ್ನು 7 ಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts