More

    ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್​ಗಳು ಉಚಿತ; ಹೆಣ್ಣು ಮಕ್ಕಳಿಗಾಗಿ ವಿಶೇಷ ಮಸೂದೆ ತಂದ ಮೊದಲ ದೇಶವಿದು

    ಎಡಿನ್​ಬರ್ಗ್​: ಹೆಣ್ಣು ಮಕ್ಕಳ ಮುಟ್ಟಿನ ಸಮಯ, ಆ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅದಕ್ಕೆಂದು ಸರ್ಕಾರಿ ಮಸೂದೆ ತರುವಂತಹ ಪ್ರಯತ್ನವನ್ನು ಯಾವ ರಾಷ್ಟ್ರವೂ ಮಾಡಿಯೇ ಇಲ್ಲ. ಇದೀಗ ಎಚ್ಚೆತ್ತುಕೊಂಡಿರುವ ಸ್ಕಾಟ್ಲೆಂಡ್​ ಸರ್ಕಾರ ಹೆಣ್ಣು ಮಕ್ಕಳ ಮುಟ್ಟಿನ ವಿಚಾರದಲ್ಲಿ ಹೊಸ ಮಸೂದೆಯೊಂದನ್ನು ತಂದಿದೆ.

    ಇದನ್ನೂ ಓದಿ: ಕೀರ್ತಿ ಸುರೇಶ್​ ಮೊದಲ ತೆಲುಗು ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

    ‘ಮುಟ್ಟಿನ ಅವಧಿ ಉತ್ಪನ್ನಗಳು ಮಸೂದೆಯನ್ನು ಸ್ಕಾಟ್ಲೆಂಡ್​ ಸಂಸತ್ತು ಅಂಗೀಕರಿಸಿದೆ. ಸಂಸತ್ತಿನ ಪ್ರತಿ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ. ಇನ್ನು ಮುಂದೆ ಸ್ಲಾಟ್ಲೆಂಡ್​ನಲ್ಲಿ ಸ್ಯಾನಿಟರಿ ಪ್ಯಾಡ್​ ಸೇರಿ ಮುಟ್ಟಿನ ಅವಧಿಗೆ ಸೇರಿದ ಎಲ್ಲ ಉತ್ಪನ್ನಗಳು ಉಚಿತವಾಗಿ ಸಿಗಲಿದೆ.

    ಸಾರ್ವಜನಿಕ ಕಟ್ಟಡಗಳಲ್ಲಿ ಮುಟ್ಟಿನ ಉತ್ಪನ್ನಗಳ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಶಾಲಾ ಕಾಲೇಜುಗಳು, ಆಸ್ಪತ್ರೆಗಳೂ ಸೇರಿ ವಿವಿಧ ಸ್ಥಳಗಳಲ್ಲಿ ಈ ವಿತರಣೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಆಯಾ ಸ್ಥಳೀಯ ಮುಖಂಡರುಗಳು ವಿತರಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ತಿಳಿಸಲಾಗಿದೆ. ಪ್ರತಿ ವರ್ಷ ಈ ಯೋಜನೆಗಾಗಿ 8.7 ಮಿಲಿಯನ್​ ಪೌಂಡ್​ ಖರ್ಚಾಗುವುದಾಗಿ ಅಂದಾಜಿಲಸಾಗಿದೆ.

    ಇದನ್ನೂ ಓದಿ: ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

    ಭಾರತದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸಂಬಳ ಸಹಿತ ರಜೆ ನೀಡಬೇಕೆಂಬ ಕೂಗು ಹಲವು ವರ್ಷದಿಂದ ಕೇಳುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ಈ ವಿಚಾರವಾಗಿ ಅನೇಕ ಚರ್ಚೆ ನಡೆದಿದೆ. ಆದರೆ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. (ಏಜೆನ್ಸೀಸ್​)

    ಶಾರ್ಟ್ಸ್​ ಮೇಲೆ ಗಣಪತಿ ಚಿತ್ರದ ಡಿಸೈನ್​; ಅಂತೂ ತಪ್ಪೊಪ್ಪಿಕೊಂಡ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts