More

    ವೈಜ್ಞಾನಿಕವಾಗಿ ಬೀದಿನಾಯಿ ಸಂತತಿ ನಿಯಂತ್ರಿಸಲು ಜೆಡಿಯು ಒತ್ತಾಯ

    ಶಿವಮೊಗ್ಗ: ಬೀದಿ ನಾಯಿಗಳ ಹಾವಳಿಯಿಂದ ಸಾವು ನೋವು ಹೆಚ್ಚುತ್ತಿದ್ದು ಸರ್ಕಾರದ ಕ್ರಮದಿಂದ ಬೀದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾಯಿಗಳ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಜೆಡಿಯು ಕಾರ್ಯಕರ್ತರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಪ್ರತಿವರ್ಷ ರಾಜ್ಯಾದ್ಯಂತ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. ವರ್ಷದಲ್ಲಿ 25 ಲಕ್ಷ ಜನರು ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. 70 ಮಂದಿ ರೇಬಿಸ್‌ಗೆ ಬಲಿಯಾಗುತ್ತಿದ್ದರೆ, 30 ಮಂದಿ ನಾಯಿ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆಂದು ಸರ್ಕಾರದ ಸಮೀಕ್ಷಾ ವರದಿಯೆ ಹೇಳುತ್ತಿದೆ. ಈಗಿನ ವಿಧಾನದಿಂದ ಇನ್ನೂ 10 ವರ್ಷ ಕಳೆದರೂ ಬೀದಿ ನಾಯಿಗಳಿಂದ ನಾಗರಿಕರಿಗೆ ಸಂಕಷ್ಟ ತಪ್ಪುವುದಿಲ್ಲ ಎಂದು ದೂರಿದರು.
    ಸುಪ್ರೀಂಕೋರ್ಟ್ ಆದೇಶದ ಮೇಲೆ ಅನಿಮಲ್ ಬರ್ತ್ ಕಂಟ್ರೋಲ್ ನಿಯಮಾನುಸಾರ ಬೀದಿನಾಯಿ ಕೊಲ್ಲುವಂತಿಲ್ಲ. ಬೇರೆಡೆ ಬಿಡುವಂತೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರವು ಪ್ರಾಣಿ ದಯಾ ಸಂಘಗಳು, ಪ್ರಾಣಿಪ್ರಿಯರ ಸಂಘಟನೆಗಳ ಜತೆಗೂಡಿ ಮುಂದಿನ 10 ವರ್ಷಗಳ ತನಕ ಬೀದಿ ನಾಯಿಗಳನ್ನು ಸರ್ಕಾರವೇ ಸಂರಕ್ಷಿಸಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
    ಈಗಿನ ವಿಧಾನಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹಾಲಿ ಕೋಟ್ಯಂತರ ಖರ್ಚು ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ತಕ್ಷಣವೇ ತಜ್ಞರ ಸಮಿತಿ ರಚನೆ ಮಾಡಿ ಬೀದಿ ನಾಯಿಗಳಿಂದ ರಾಜ್ಯದ ಜನತೆಯನ್ನು ರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದರು. ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಜಿಲ್ಲಾಧ್ಯಕ್ಷ ದೇವರಾಜ್ ಶಿಂಧೆ, ಇಸಾಕ್, ರಫೀಕ್, ಆಯಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts