More

    ಅಂತಾರಾಷ್ಟ್ರೀಯ ವಿಜ್ಞಾನಿಗಳ ವಿಜ್ಞಾನ ವಿಸ್ತೃತ ಕಾರ್ಯಕ್ರಮ: ಟಿ. ಈಶ್ವರ

    ಗದಗ : ಜಿಲ್ಲೆಯ ಲಕ್ಷ್ಮೇಶ್ವರದ ಸ್ಕೂಲ್ ಚಂದನ್‌ದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಮೂರು ದಿನಗಳ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಇದೇ ಡಿ. 10 ರಿಂದ 12ರ ವರೆಗೆ ನಡೆಯಲಿದೆ ಎಂದು ಶಾಲೆಯ ಸಂಸ್ಥಾಪಕ ಟಿ. ಈಶ್ವರ ಹೇಳಿದರು.

    ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರತ್ನ ಸಿ.ಎನ್‌ಆರ್ ರಾವ್ ಎಜ್ಯುಕೇಶನ್ ಫೌಂಡೇಶನ್ ಹಾಗೂ ಸ್ಕೂಲ್ ಚಂದನ್ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜ್ಞಾನ ವಿಸ್ತೃತ ಕಾರ್ಯಕ್ರಮ- 2023 ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಡಿ. 10 ರಂದು ಬೆಳಗ್ಗೆ 9.45ಕ್ಕೆ ಸ್ಕೂಲ್ ಚಂದನ್ ಶಾಲೆ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿಎನ್‌ಆರ್‌ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಜೆಎನ್‌ಸಿಎಎಸ್‌ಆರ್ ಜಿ.ಯು. ಕುಲಕರ್ಣಿ, ಪ್ರೋ. ಎಸ್.ಎಂ. ಶಿವಪ್ರಸಾದ, ಪ್ರೋ. ಈಶ್ವರ ಮೂರ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ವಿಶೇಷವಾಗಿ ಯುಎಸ್‌ಎ, ಯುಕೆದಿಂದ ಖ್ಯಾತ ವಿಜ್ಞಾನಿಗಳು, ಅನಿವಾಸಿ ಭಾರತೀಯರು, ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಭಾರತೀಯ ಪ್ರಾಧ್ಯಾಪಕರು ಈ ವಿಜ್ಞಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ವಿಷಯ ಮಂಡನೆ, ಸಂವಾದ, ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

    ಈ ಮೂರು ದಿನಗಳ ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮದಲ್ಲಿ ಭಾಗಿಯಾಗಲು 250 ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು 250 ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆಯಿದೆ.‌ ಸ್ಥಳದಲ್ಲೆ ನೋಂದಣಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಜೊತೆಗೆ ವಿಜ್ಞಾನ ಶಿಕ್ಷಕರು, ಅದರಲ್ಲೂ ಸರಕಾರಿ ಶಾಲೆ ವಿಜ್ಞಾನ ಶಿಕ್ಷಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಊಟ, ವಸತಿ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುವುದು. ನೋಂದಣಿ ಸಹ ಉಚಿತವಾಗಿದೆ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶಾಲೆಯ ಪ್ರಾಚಾರ್ಯ ರಾಮು ಬಾವನವರ, ಲಕ್ಷ್ಮೇಶ್ವರ ಪುರಸಭೆ ಸದಸ್ಯ ವಿಜಯ ಕರಡಿ ಉಪಸ್ಥಿತರಿದ್ದರು.

    ಪ್ರಶಸ್ತಿ ಪ್ರದಾನ: ವಿಜ್ಞಾನಿ ಸಿಎನ್‌ಆರ್ ರಾವ್ ಅವರಿಗೆ 90 ವಸಂತ ತುಂಬಿದ ಈ ಶುಭ ಸಂದರ್ಭದಲ್ಲಿ ಅವರಿಗೆ ಚಂದನ್ ಶಾಲೆ ವತಿಯಿಂದ ಚಂದನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟಿ. ಈಶ್ವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts