More

    ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ಕಿವಿಮಾತು

    ಗಂಗಾವತಿ: ಮಕ್ಕಳ ಕಲಿಕೆಗೆ ಶಿಕ್ಷಕರು, ಪಾಲಕರು ಪ್ರೇರಣೆಯಾಗಬೇಕಿದ್ದು, ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ಹೇಳಿದರು.

    ನಗರದ ಗುಡ್‌ಶೆರ್ಡ್ ಪ್ರಾಥಮಿಕ ಶಾಲೆ, ಬೆಥೇಲ್ ನರ್ಸರಿ, ಆಂಗ್ಲ ಮಾಧ್ಯಮ ಪ್ರೌಢ, ಪಿಯು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಆವಿಷ್ಕಾರಗಳು ಕಲಿಕೆ ಗುಣಮಟ್ಟ ಹೆಚ್ಚಿಸುತ್ತಿದ್ದು, ಓದುವ ಆಸಕ್ತಿ ಹೆಚ್ಚಿಸಲಿದೆ. ವಿಜ್ಞಾನ ಸಂಬಂಧಿಸಿದ ಆವಿಷ್ಕಾರಗಳು ಹೊಸ ಜಗತ್ತನ್ನು ಅನಾವರಣಗೊಳಿಸುತ್ತಿದ್ದು, ಕ್ರೀಯಾಶೀಲತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

    ಬಿಇಒ ಸೋಮಶೇಖರಗೌಡ ಮಾತನಾಡಿ, ಪಠ್ಯದೊಂದಿಗೆ ಕ್ರಿಯಾಶೀಲ ಚಟುವಟಿಕೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರಿಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದ್ದು, ಪಾಲಕರು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳು ರೂಪಿಸಿದ ಡ್ರೋನ್, ಅಪಘಾತ ಸೂಚನೆ ನೀಡುವ ಸಿಗ್ನಲ್, ಸಿರಿಧಾನ್ಯಗಳ ಮಹತ್ವ, ಕನ್ನಡ ಭಾಷೆ ಸಾಧಕರ ಮಾಹಿತಿ ಸೇರಿ 70ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಲಾಯಿತು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಗದು ಬಹುಮಾನ ನೀಡಲಾಯಿತು.

    ಇಸಿಐ ಚರ್ಚ್ ಬಿಷಪ್ ರೆ.ಜಾನ್ ಮುಳ್ಳೂರು, ಹಳೇ ವಿದ್ಯಾರ್ಥಿ ಸಂಘದ ಪ್ರತಿನಿಧಿ ಡಾ.ಮಯೂರ್ ಪಾಟೀಲ್, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಆಡಳಿತಾಧಿಕಾರಿ ಪ್ರೊ.ಬಿ.ಸಿ.ಐಗೋಳ, ಮುಖ್ಯಶಿಕ್ಷಕರಾದ ಹೇಮ ಸುಧಾಕರ ದಯಾಶೀಲ್, ಮನೋಜ ಸ್ವಾಮಿ ಹಿರೇಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts