More

    ಪುನರಾರಂಭದವರೆಗೆ ಶಾಲೆಗಳು ವಾರ್ಷಿಕ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ; ದೆಹಲಿ ಹೈಕೋರ್ಟ್​ ಮಹತ್ವದ ಆದೇಶ

    ನವದೆಹಲಿ: ಶಾಲೆಗಳು ಇನ್ನೂ ಆರಂಭವೇ ಆಗಿಲ್ಲ, ಆಧರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕವನ್ನು ಪಾವತಿಸಿ ಎಂದು ಪಾಕರಿಗೆ ದುಂಬಾಲು ಬಿದ್ದು ಹಣ ಪಡೆಯುತ್ತಿವೆ.
    ಈ ನಡುವೆ, ದೆಹಲಿ ಹೈಕೋರ್ಟ್​ ಶಾಲಾ ಶುಲ್ಕದ ವಿಚಾರವಾಗಿ ಮಹತ್ವದ ಉಲ್ಲೇಖವೊಂದನ್ನು ಮಾಡಿದೆ. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಇಂಥ ಸಂದರ್ಭದಲ್ಲಿ ಶಾಲೆಯ ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ಜಯಂತ್​ ನಾಥ್​ ಆಗಸ್ಟ್​ 25 ರಂದು ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿದ್ದ ಅಂಶವನ್ನೇ ದೆಹಲಿ ಹೈಕೋರ್ಟ್​ ಕೂಡ ಎತ್ತಿ ಹಿಡಿದಿದೆ.

    ಇದನ್ನೂ ಓದಿ; ರಾಜ್ಯದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಡಿಸಿಎಂ ವಿಶ್ವಾಸ; ನಡೆದಿದೆ ಕಾನೂನು, ಆಡಳಿತಾತ್ಮಕ ಸಿದ್ಧತೆ 

    ಜುಲೈನಿಂದ ಅನ್ವಯಿಸುವಂತೆ ಶಾಲಾ ಆರಂಭದವರೆಗೂ ಈ ಎರಡೂ ಶುಲ್ಕಗಳನ್ನು ಪಡೆಯುವಂತಿಲ್ಲ ಎಂದು ಕೈಕೋರ್ಟ್​ ಹೇಳಿದೆ. ಖಾಸಗಿ ಶಾಲೆಗಳ ಪಾಲಕರ ಸಂಘದ ವತಿಯಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ವೇಳೆ ಇದನ್ನು ಹೇಳಿದೆ.

    ಹೀಗಾಗಿ ಯಾವುದೇ ಶಾಲೆಗಳು ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವುದಕ್ಕೆ ಅವಕಾಶವಿಲ್ಲವೆಂದು ತಿಳಿಸಿದೆ.ಲಾಕ್​ಡೌನ್​ ತೆರವು ಮಾಡಲಾಗಿದೆ. ಈ ಕಾರಣಕ್ಕೆ ಶುಲ್ಕ ಪಡೆಯಬಹುದು ಎಂದು ಖಾಸಗಿ ಶಾಲೆಗಳು ವಾದಿಸಿದ್ದವು.

    ಇದನ್ನೂ ಓದಿ; ಮಂಗಳವಾರ ಶಾಲಾ- ಕಾಲೇಜು ಓಪನ್​; ವಿದ್ಯಾರ್ಥಿಗಳಿಗೆ ತರಬೇತಿ, ಸಿದ್ಧತೆ ಪೂರ್ಣಗೊಂಡಿರೋದೆಲ್ಲಿ ? 

    ಈ ನಡುವೆ ದೆಹಲಿ ಸರ್ಕಾರದ ವಕೀಲರು ವಾದ ಮಂಡಿಸಿ, ಸರ್ಕಾರ ಏಪ್ರಿಲ್​ 18ರಂದು ಆದೇಶ ಹೊರಡಿಸಿ, ಶಾಲೆಗಳು ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕ ಪಡೆಯದಂತೆ ನಿರ್ದೇಶನ ನೀಡಿದೆ. ಶಾಲೆಗಳು ಪುನರಾರಂಭವಾಗದ ಕಾರಣ ಈ ಆದೇಶ ಇನ್ನೂ ಜಾರಿಯಲ್ಲಿದೆ ಎಂದು ಸ್ಪಷ್ಪಡಿಸಿದರು. ಕೋರ್ಟ್​ ಸೆಪ್ಟಂಬರ್​ 16ಕ್ಕೆ ವಿಚಾರಣೆಯನ್ನು ಮುಂದೂಡಿತು.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts