More

    ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಆಲಯ

    ಯಳಂದೂರು : ದೇಗುಲಗಳಲ್ಲಿನ ಗಂಟೆ ಶಬ್ದವನ್ನು ಹೆಚ್ಚಿಸುವ ಬದಲು ನಾವು ಶಾಲೆಗಳ ಗಂಟೆ ಶಬ್ದಗಳನ್ನು ಹೆಚ್ಚು ಮಾಡುವ ಅಂಬೇಡ್ಕರ್ ವಾಣಿಯಂತೆ ಜಾಗೃತ ಸಮಾಜ ನಿರ್ಮಿಸುವ ಅಗತ್ಯತೆ ಇದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

    ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಸಿದ್ಧಾರ್ಥ ವಿದ್ಯಾಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಆಲಯಗಳಾಗಿವೆ. ಇಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಬೋಧಿಸುವ ಜತೆಗೆ ಜೀವನವನ್ನು ರೂಪಿಸಿಕೊಳ್ಳುವ ಕೌಶಲಗಳನ್ನು ಹೇಳಿಕೊಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಇವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕು.

    ಪಟ್ಟಣದಲ್ಲಿ ಹಲವು ದಶಕಗಳ ಹಿಂದೆ ಸರ್ಕಾರಿ ನಿವೃತ್ತ ನೌಕರರು ಗ್ರಾಮೀಣ ಭಾಗದ ಬಡ ಮಕ್ಕಳ ನೆರವಿಗೆ ಈ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದರು. ಇಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಈ ಶಾಲೆ ಅಂದಿನಿಂದಲೂ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದೆ. ಇಂತಹ ಶಾಲೆಗೆ ಬೇಕಾಗುವ ಅಗತ್ಯ ನೆರವನ್ನು ನಾನು ನೀಡಲು ಸಿದ್ಧನಿದ್ದೇನೆ ಎಂದರು.

    ಬಿಇಒ ಕೆ.ಕಾಂತರಾಜು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಸಂಸ್ಥೆಯ ಅಧ್ಯಕ್ಷ ನಂಜುಂಡಸ್ವಾಮಿ ಕಾರ್ಯದರ್ಶಿ ರಮೇಶ್‌ಕುಮಾರ್, ನಿರ್ದೇಶಕರಾದ ಕೃಷ್ಣಯ್ಯ, ಸಿದ್ದಯ್ಯ, ಸಿದ್ದರಾಜು, ಶ್ರೀನಿವಾಸಮೂರ್ತಿ, ಪಪಂ ಮಾಜಿ ಸದಸ್ಯ ಜೆ.ಶ್ರೀನಿವಾಸ್, ಮುಖ್ಯಶಿಕ್ಷಕ ಎ. ಶಿವಣ್ಣ, ಮಹದೇವ, ಶಾಂತರಾಜಶೆಟ್ಟಿ, ಗೋಪಾಲಕೃಷ್ಣ, ಮುರುಳೀಧರ, ರಾಘು, ನಾಗಮ್ಮ, ರತ್ನಮ್ಮ , ವಜ್ರಮುನಿ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts