More

    ಶಾಲಾ ಕಾಲೇಜುಗಳು ಬಂದ್, 11 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ

    ಚಂಡೀಗಢ : ಕರೊನಾ ಸೋಂಕಿನ ದರ ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್​ನಲ್ಲಿ ಮಾರ್ಚ್ 31 ರವರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ನಾಳೆಯಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಈವರೆಗೆ ಕರೊನಾ ಸೋಂಕು ಹೆಚ್ಚು ವರದಿಯಾಗಿರುವ 8 ಜಿಲ್ಲೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿತ್ತು. ಇದೀಗ ಈ ಕ್ರಮವನ್ನು 11 ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು, ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ 11 ಜಿಲ್ಲೆಗಳಲ್ಲಿ ಎಲ್ಲಾ ಸಾಮಾಜಿಕ ಕೂಟಗಳು ಮತ್ತು ಇತರ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಅಂತ್ಯಕ್ರಿಯೆಗಳು, ಶವಸಂಸ್ಕಾರಗಳು ಮತ್ತು ವಿವಾಹಗಳನ್ನು ಮಾತ್ರ ಕೇವಲ 20 ಜನರ ಹಾಜರಾತಿಯೊಂದಿಗೆ ನಡೆಸಲು ಅನುಮತಿ ನೀಡಲಾಗಿದೆ.

    ಇದನ್ನೂ ಓದಿ: “18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಿ” : ಕೇಜ್ರಿವಾಲ್

    ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಬೇರೆಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮಾರ್ಚ್ 31 ರವರೆಗೆ ಮುಚ್ಚಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಜೊತೆಗೆ ಮಾಲ್​ಗಳಲ್ಲಿ ಒಮ್ಮೆಗೆ 100 ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಬೇಕು ಮತ್ತು ಚಿತ್ರಮಂದಿರಗಳು ಶೇ.50 ರಷ್ಟು ಸೀಟುಗಳನ್ನು ಮಾತ್ರ ತುಂಬಬೇಕು ಎಂದೂ ಸಹ ಆದೇಶಿಸಿದೆ.

    ಪಂಜಾಬ್​ನಲ್ಲಿ ನಿನ್ನೆ 24 ಗಂಟೆಗಳ ಅವಧಿಯಲ್ಲಿ 2,387 ಕರೊನಾ ಪ್ರಕರಣಗಳು ವರದಿಯಾಗಿದ್ದವು. ರಾಜ್ಯದಲ್ಲಿ 2.05 ಲಕ್ಷ ಕೋವಿಡ್ ಪಾಸಿಟೀವ್ ಪ್ರಕರಣಗಳಿದ್ದು, ಸಾವಿನ ಸಂಖ್ಯೆಯು 6,204 ತಲುಪಿದೆ ಎಂದು ಡೈಲಿ ಹೆಲ್ತ್ ಬುಲೆಟಿನ್ ವರದಿ ಮಾಡಿದೆ. ಕರೊನಾಗೆ ಪ್ರಾಣ ಕಳೆದುಕೊಂಡ ಜನರಿಗೆ ಶ್ರದ್ಧಾಂಜಲಿಯಾಗಿ ಪ್ರತಿ ಶನಿವಾರ ಒಂದು ಗಂಟೆ ಮೌನ ಆಚರಿಸಲು ಸರ್ಕಾರ ಕರೆ ನೀಡಿದೆ. ಈ ಸಮಯದಲ್ಲಿ ಯಾವುದೇ ವಾಹನಗಳು ಚಲಿಸಲು ಅನುಮತಿ ಇರುವುದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಣಿಪಾಲ್ ಇನ್ಸ್​ಟಿಟ್ಯೂಟ್​ನಲ್ಲಿ 59 ವಿದ್ಯಾರ್ಥಿಗಳಿಗೆ ಕರೊನಾ… ಕಂಟೇನ್​ಮೆಂಟ್ ಜೋನ್ ಘೋಷಣೆ

    ಬಿಡುಗಡೆಯ ಬೆನ್ನಲ್ಲೇ ನೆಟ್ಟಿಗರ ಹುಬ್ಬೇರಿಸಿದ “ಮುಂಬೈ ಸಗಾ”

    ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts