More

    ಪಗಡೆ ಆಡಿ ಸಂಭ್ರಮಿಸಿದ ಮಕ್ಕಳು

    ಹುಬ್ಬಳ್ಳಿ: ತಾಲೂಕಿನ ಕೊಟಗುಂಡಹುಣಸಿ ಗ್ರಾಮದಲ್ಲಿನ ಕೆಎಲ್​ಇ ಶಾಲೆಯ ಮಕ್ಕಳು ಬುಧವಾರ ದೇಶದ ಪಾರಂಪರಿಕ ಆಟ ಪಗಡೆ ಆಡಿ ಸಂಭ್ರಮಿಸಿದರು.

    ಈ ಆಟವನ್ನು ಶಾಲೆಯಲ್ಲಿ ವಿಭಿನ್ನವಾಗಿ, ನೈಜ ಸ್ವರೂಪದಲ್ಲಿ ಆಡಿಸಲಾಯಿತು. ಆಟದ ಮೈದಾನದಲ್ಲಿ ಪಗಡೆ ಹಾಸನ್ನು ಬಣ್ಣ ಬಣ್ಣಗಳಿಂದ ಚಿತ್ರಿಸಲಾಗಿತ್ತು. ಮಕ್ಕಳ ತಂಡಗಳನ್ನು ರಚಿಸಿ ಆಟದ ಕಾಯಿಗಳನ್ನಾಗಿ ಮಕ್ಕಳನ್ನೇ ಮಾಡಿ ಆಡಲಾಯಿತು. ಮಕ್ಕಳಿಗೆ ಪಗಡೆ ಆಟ ಹೊಸ ಅನುಭವವನ್ನು ನೀಡಿತು.

    ಈಗಿನ ಮಕ್ಕಳು ಹೊಸ ಹೊಸ ಆಟಗಳ ನಡುವೆ ಇಂತಹ ಪಾರಂಪರಿಕ ಆಟಗಳನ್ನು ಮರೆಯುತ್ತಿದ್ದಾರೆ ಹಾಗೂ ಆಟದ ಮೌಲ್ಯಗಳಷ್ಟೇ ಅಲ್ಲದೆ , ಬುದ್ಧಿ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ನಮ್ಮ ದೇಶದ ಇಂತಹ ಹಲವು ಪಾರಂಪರಿಕ ಆಟಗಳನ್ನು ಮಕ್ಕಳಿಗೆ ಆಡಿಸುವುದು ಒಳಿತು ಎಂಬ ದೃಷ್ಟಿಯಿಂದ ಪ್ರಯತ್ನ ನಡೆಸಲಾಯಿತು ಎಂದು ಮುಖ್ಯ ಶಿಕ್ಷಕಿ ಶ್ವೇತಾ ಸಂಗಮ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts