More

    ತುಂಬಿದ ತಾಯಕನಹಳ್ಳಿ ಹಳ್ಳ ದಾಟಿದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು

    ಕಾನಹೊಸಹಳ್ಳಿ; ಈ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕೆಂದರೆ ಚಿನ್ನಹಗರಿ ಹಳ್ಳ ದಾಟಿಕೊಂಡೇ ಹೋಗಬೇಕು. ಸದ್ಯ ನಿರಂತರ ಮಳೆಯಿಂದ ಹಳ್ಳ ತುಂಬಿದ್ದು, ಹರಿಯುವ ನೀರಿನಲ್ಲೆ ಶಾಲಾ ಮಕ್ಕಳು, ಶಿಕ್ಷಕರು ನಡೆದುಕೊಂಡೆ ಹೋಗುತ್ತಿರುವುದು ತಾಯಕನಹಳ್ಳಿ ಹೊರವಲಯದಲ್ಲಿ ಸೋಮವಾರ ಕಂಡು ಬಂತು.

    ಶಾಲೆ ಗ್ರಾಮದ ಹೊರವಲಯದಲ್ಲಿದ್ದು, ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಪರ್ಯಾಯ ಮಾರ್ಗವಿಲ್ಲದೆ ಹಳ್ಳವನ್ನು ದಾಟಿಕೊಂಡು ಹೋಗಬೇಕಿದೆ. ಅಥವಾ ಜಮೀನುಗಳ ಮೂಲಕ ಸುತ್ತಿಕೊಂಡು ಬರಬೇಕಿದೆ. ನಾಲ್ಕೈದು ದಿನಗಳಿಂದ ಹಳ್ಳ ತುಂಬಿ ಹರಿಯುತ್ತಿದ್ದು ಮತ್ತು ಶಾಲೆಗೆ ರಜೆ ಇದ್ದ ಕಾರಣ ಸಮಸ್ಯೆ ಕಂಡು ಬರಲಿಲ್ಲ. ಆದರೆ, ಸೋಮವಾರ ದಸರಾ ರಜೆ ಮುಗಿದು ಶಾಲೆಗಳು ಆರಂಭವಾದರಿಂದ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹಳ್ಳ ಅಡ್ಡಲಾಯಿತು. ಅನಿವಾರ್ಯವಾಗಿ ಮಕ್ಕಳು ಹಳ್ಳದಲ್ಲಿ ಮೊಣಕಾಲಿಗಿಂತ ಹೆಚ್ಚು ಹರಿಯುವ ನೀರಿನಲ್ಲಿಯೇ, ಬಟ್ಟೆಗಳ ಒದ್ದೆ ಮಾಡಿಕೊಂಡು ಹಳ್ಳ ದಾಟಿದರು, ಶಿಕ್ಷಕರು ಮುಂದೆ ನಿಂತು ಮಕ್ಕಳನ್ನು ದಡ ಸೇರಿಸಿದರು.

    ಮೂರು ವಷರ್ಗಳ ಹಿಂದೆಯೂ ಹೀಗೇ ಸಮಸ್ಯೆಯಾಗಿತ್ತು, ಹಳ್ಳ ಜಾಸ್ತಿ ಹರಿದರೆ ಶಾಲೆಗೆ ರಜೆ ಘೋಷಿಸಲಾಗುತ್ತಿದೆ. ಹಲವು ಬಾರಿ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಮುಖ್ಯ ಶಿಕ್ಷಕ ರಂಗಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts