More

  ದೇಶದ್ರೋಹದ ಆರೋಪಕ್ಕೆ ಒಳಗಾಗಿರುವ ಬೀದರ್​ ಶಾಲೆಯಿಂದ ಸ್ವಚ್ಛತಾ ಅಭಿಯಾನ

  ಬೀದರ್​: ಪೌರತ್ವ ಕಾಯ್ದೆ (ತಿದ್ದುಪಡಿ) ವಿರೋಧಿ ನಾಟಕ ಪ್ರದರ್ಶಿಸುವ ಮೂಲಕ ದೇಶದ್ರೋಹದ ಆರೋಪಕ್ಕೆ ಒಳಗಾಗಿದ್ದ ಬೀದರ್​ನ ಶಾಲೆ ಇದೀಗ ಕರೊನಾ ವಾರಿಯರ್​ ಆಗಿ ದೇಶ ಸೇವೆಯಲ್ಲಿ ತೊಡಗಿದೆ. ಬೀದರ್​ ಜಿಲ್ಲೆಯಾದ್ಯಂತ ಇರುವ ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್​ಗಳನ್ನು ಸ್ಯಾನಿಟೈಸರ್​ ಹಾಕಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅದು ತೊಡಗಿದೆ.

  ಈ ಬಗ್ಗೆ ಮಾಹಿತಿ ನೀಡಿರುವ ಶಾಹೀನ್​ ಸ್ಕೂಲ್​ನ ಆಡಳಿತ ಮಂಡಳಿ ಸದಸ್ಯರು, ಜಿಲ್ಲೆಯಾದ್ಯಂತ 250ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳಿವೆ. ಲಾಕ್​ಡೌನ್​ ಅವಧಿಯಲ್ಲಿ ಇವೆಲ್ಲವೂ ಮುಚ್ಚಲ್ಪಟ್ಟಿದ್ದವು. ಇದೀಗ ಅನ್​ಲಾಕ್​ 1.0 ಜಾರಿಯಲ್ಲಿರುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವನ್ನು ಕರೊನಾ ಮುಕ್ತ ಪ್ರದೇಶವಾಗಿರಿಸುವ ಉದ್ದೇಶದಿಂದ ಅವೆಲ್ಲವನ್ನೂ ಸ್ಯಾನಿಟೈಸ್​ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

  ಕಳೆದೊಂದು ವಾರದಿಂದ ತಮ್ಮ ಶಾಲೆಯ ವತಿಯಿಂದ 4 ಟ್ಯಾಂಕರ್​ಗಳು ಧಾರ್ಮಿಕ ಕೇಂದ್ರಗಳ ಸ್ಯಾನಿಟೈಸ್​ ಕಾರ್ಯದಲ್ಲಿ ತೊಡಗಿವೆ. ಇದುವರೆಗೂ 100ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳನ್ನು ಸ್ಯಾನಿಟೈಸ್​ ಮಾಡಲಾಗಿದೆ ಎಂದು ಶಾಹೀನ್​ ಸ್ಕೂಲ್​ನ ಸಿಇಒ ತೌಸೀಫ್​ ಮಡಿಕೇರಿ ತಿಳಿಸಿದ್ದಾರೆ.

  ಇದನ್ನೂ ಓದಿ: ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!

  ಶಾಲೆಯ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಬೀದರ್​ನ ಪಾಂಡುರಂಗ ಮಂದಿರದ ಚಂದ್ರಶೇಖರ್​ ಗಾಡಾ, ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ತೋರುತ್ತಿರುವ ಬದ್ಧತೆಗೆ ನಾವು ಮಾರುಹೋಗಿದ್ದೇವೆ. ಧಾರ್ಮಿಕ ಸೌಹಾರ್ದತೆ ಸಾರುವ ಇವರ ಕೆಲಸವನ್ನು ಮೆಚ್ಚಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ. ಮೆಥಾಡಿಸ್ಟ್​ ಚರ್ಚ್​ನ ಧಾರ್ಮಿಕ ಗುರು ಎಂ.ಪಿ. ಜೈಪಾಲ್​ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

  See also  ಭಾರತ ಕಿರಿಯರ ತಂಡ ಶುಭಾರಂಭ: ಆಫ್ಘನ್ ಎದುರು 6 ವಿಕೆಟ್‌ಗಳ ಗೆಲುವು

  ಸದ್ಯ ಶಾಲೆಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಶಾಲೆಯನ್ನು ಕ್ವಾರಂಟೈನ್​ ಸೌಲಭ್ಯಕ್ಕಾಗಿ ಬಳಸಿಕೊಳ್ಳುತ್ತಿದೆ. ಸದ್ಯ ಇದಲ್ಲಿ ಅಂದಾಜು 500 ಜನರನ್ನು ಕ್ವಾರಂಟೈನ್​ ಮಾಡಲಾಗುತ್ತಿದೆ.

  ಪೌರತ್ವ ಕಾಯ್ದೆ (ತಿದ್ದುಪಡಿ) ಪ್ರತಿಭಟನೆಗಳು ತಾರಕದಲ್ಲಿ ಇದ್ದ ಸಂದರ್ಭದಲ್ಲಿ ಈ ಶಾಲೆಯ ಮಕ್ಕಳು ಈ ವರ್ಷದ ಜನವರಿಯಲ್ಲಿ ಸಿಎಎ ವಿರೋಧಿ ನಾಟಕವನ್ನು ಪ್ರದರ್ಶಿಸಿದ್ದರು. ಅಲ್ಲದೆ, 6ನೇ ತರಗತಿಯ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವ ಡೈಲಾಗ್​ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಾಯಿ ಮತ್ತು ಶಾಲೆಯ ಅಧ್ಯಕ್ಷ ಸೇರಿ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  ಎಸ್​ಐ ಹುದ್ದೆ ಸಿಕ್ಕರೂ ಕಾನ್ಸ್​ಟೆಬಲ್ ಆಗಿರೋದೆ ವಾಸಿ ಅನ್ನೋ ನಿರ್ಧಾರಕ್ಕೇ ಅಂಟಿಕೊಂಡ್ರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts