More

    ಜೂನ್​ 10ರವರೆಗೆ ಶಾಲಾ- ಕಾಲೇಜುಗಳಿಗೆ ರಜೆ ನೀಡಿದ ಸಿಎಂ ಯಾರು?

    ಕೋಲ್ಕತ್ತ: ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪಿಯು ಪರೀಕ್ಷೆ ಯಾವಾಗ ಎ.ಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಾಕ್​ಡೌನ್​ ಮುಗಿದ ಮೇಲೆ ಪರಿಸ್ಥಿತಿ ಅವಲೋಕಿಸಿ, ವಿದ್ಯಾರ್ಥಿಗಳಿಗೆ ಪಾಠಗಳ ಪುನರ್ಮನನಕ್ಕೆ ಅವಕಾಶ ನೀಡಿ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಈಗಾಗಲೇ ಹೇಳಿದ್ದಾರೆ.

    ಈ ನಡುವೆ, ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದೆ. ಜತೆಗೆ, ಶಾಲೆಗಳಿಗೆ ಬೇಸಿಗೆ ರಜೆ ಕೂಡ ಇದೆ. ಹೀಗಾಗಿ ಶಾಲೆಗಳು ಮತ್ತೆ ಯಾವಾಗ ಆರಂಭವಾಗುತ್ತವೆ. ಪರೀಕ್ಷೆಗಳನ್ನು ನಡೆಸುವುದು ಯಾವಾಗ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ, ಶಿಕ್ಷಕರಲ್ಲೂ ಮನೆ ಮಾಡಿದೆ. ಇದೆಲ್ಲದರ ನಡುವೆ, ಆಗಸ್ಟ್​ಗೆ ಶಾಲೆಗಳನ್ನು ಮರುಆರಂಭಿಸಿ ಎಂಬ ಒತ್ತಾಯ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಕೇಳಿ ಬಂದಿದೆ.

    ಈ ಗೊಂದಲ ಕರ್ನಾಟಕದಲ್ಲಷ್ಟೇ ಇರುವುದಲ್ಲ, ಪರೀಕ್ಷೆ ನಡೆಯದ ಎಲ್ಲ ಪ್ರಮುಖ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ. ಇಂಥ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮತ್ರಿ ಕೈಗೊಂಡಿರುವ ಕ್ರಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊಂಚ ನಿರಾಳತೆಯನ್ನು ಮೂಡಿಸಿದೆ. ಹೌದು… ಸಿಎಂ ಮಮತಾ ಬ್ಯಾನರ್ಜಿ ಜೂನ್​ 10ರವರೆಗೆ ಪಶ್ಚಿಮ ಬಂಗಾಳದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.

    ರಾಜ್ಯದಲ್ಲಿ ಏಪ್ರಿಲ್​ 30ರ ಬಳಿಕ ಲಾಕ್​ಡೌನ್ ತೆರವಾದರೂ ಪರೀಕ್ಷೆ ನಡೆಸುವ ವಾತಾವರಣ ಇರಲಿದೆಯೇ? ಅಲ್ಲದೆ, 15ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಬೇಕು ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ. ಹಾಗಿದ್ದರೆ, ಬೇಸಿಗೆ ರಜೆಯನ್ನು ಮೊಟಕುಗೊಳಿಸಿ ಪರೀಕ್ಷೆ ನಡೆಸಲಾಗುತ್ತಾ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ. ಹೀಗಾಗಿ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

    ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ 17 ತಬ್ಲಿಘಿಗಳು ಜೈಲಿಗೆ ರವಾನೆ

    ತಾಯ್ತನದ ರಜೆ ಬೇಡವೆಂದು ತಿಂಗಳ ಮಗುವಿನೊಂದಿಗೆ ಕರೊನಾ ಕರ್ತವ್ಯಕ್ಕೆ ಹಾಜರಾದ ಐಎಎಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts