More

    ಪುಂಡಾಟಿಕೆ ಬಿಡದಿದ್ದರೆ ಪ್ರಧಾನಿಗೆ ಪತ್ರ – ಸಚಿವ ಲಕ್ಷ್ಮಣ ಸವದಿ

    ಅಥಣಿ: ಶಿವಸೇನೆಯ ಕೆಲ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಕರ್ನಾಟಕದ ಸಾರಿಗೆ ಬಸ್‌ಗಳ ಕನ್ನಡ ಲಕಗಳಿಗೆ ಕಪ್ಪು ಬಣ್ಣ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಬರೆಯುತ್ತಿರುವುದು ಖಂಡನೀಯ. ಶಿವಸೇನೆಯವರು ತಮ್ಮ ಈ ಹುಚ್ಚು ಪುಂಡಾಟ ಬಿಡದಿದ್ದಲ್ಲಿ
    ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಬೇಕಾಗುತ್ತದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಹಾರಾಷ್ಟ್ರ ಸಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಲವಾಗಿದೆ. ಹೀಗಾಗಿ ಅಲ್ಲಿನ ಜನರ ಗಮನ ಬೇರೆಡೆ ಸೆಳೆಯುಲು ಗಡಿ ತಂಟೆ ಮುಂದುವರಿಸುತ್ತಲೇ ಇದೆ. ಅಲ್ಲದೆ, ವರ್ಷ ಕಳೆದರೂ ತನ್ನ ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಣ ಮಾಡುವಲ್ಲಿ ಅವರ ಸರ್ಕಾರ ವಿಫಲ ವಾಗಿದೆ ಎಂದು ಆರೋಪಿಸಿದರು.

    ಶಿವಸೇನೆ ಕಾರ್ಯಕರ್ತರು ಪದೇಪದೆ ನಡೆಸುವ ಕಿಡಿಗೇಡಿತನದಿಂದಾಗಿ ನಮ್ಮ ಗಡಿಭಾಗದ ಜನರ ಜತೆಗೆ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಮಹಾ ಸರ್ಕಾರ ಅಲ್ಲಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ನಾವೂ ಮುಂದಾಗಬೇಕಾಗುತ್ತದೆ ಎಂದು ಸಚಿವ ಸವದಿ ಹೇಳಿದರು.

    ತೈಲ ಬೆಲೆ ಏರಿಕೆ ಗೆಲುವಿಗೆ ತೊಡಕಾಗದು: ರಾಜ್ಯದ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಈ ತಿಂಗಳ ಕೊನೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಪಂಚರಾಜ್ಯಗಳೊಂದಿಗೆ ಈ ನಾಲ್ಕೂ ಕೇತ್ರಗಳು ಮತ್ತು ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ವಿಚಾರ ನಮ್ಮ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts