More

    ಅಶ್ಲೀಲ ವಿಡಿಯೋ ಕೇಸ್​: ರಾಜ್​ ಕುಂದ್ರಾ, ಪೂನಂ ಪಾಂಡೆ, ಶೆರ್ಲಿನ್​ ಚೋಪ್ರಾಗೆ ಸುಪ್ರೀಂನಿಂದ ಬಿಗ್​ ರಿಲೀಫ್​

    ನವದೆಹಲಿ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ, ಮಾಡೆಲ್​ ಕಂ ನಟಿ ಪೂನಂ ಪಾಂಡೆ, ಶೆರ್ಲಿನ್​ ಚೋಪ್ರಾ ಮತ್ತು ಉಮೇಶ್​ ಕಾಮತ್​ ಎಂಬುವರಿಗೆ ಸುಪ್ರೀಂಕೋರ್ಟ್​ ಮಂಗಳವಾರ (ಡಿ.13) ನಿರೀಕ್ಷಣಾ ಜಾಮೀನು ನೀಡಿದೆ.

    ಜಾಮೀನಿನ ಜೊತೆಗೆ ಆರೋಪಿಗಳು ಅಗತ್ಯಬಿದ್ದಾಗ ತನಿಖೆಗೆ ಸರಿಯಾಗಿ ಸಹಕಾರ ನೀಡಬೇಕು ಎಂದು ಕೋರ್ಟ್​ ಸೂಚಿಸಿದೆ. ಇದೇ ಸಂದರ್ಭದಲ್ಲಿ ಎಲ್ಲ ಆರೋಪಿಗಳು ನಿಯಮಿತ ಜಾಮೀನಿಗಾಗಿ ಮುಂಬೈ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬೇಕಿದೆ. ಅಲ್ಲದೆ, ತಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕೆಂದು ರಾಜ್​ ಕುಂದ್ರಾ ಮತ್ತು ಪೂನಂ ಪಾಂಡೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

    ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ ಜೋಸೆಫ್​, ಈ ರೀತಿಯ ಪ್ರಕರಣದಲ್ಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ವಿಸ್ತರಿಸಬೇಕೇ ಎಂಬುದು ನಮಗಿರುವ ಆತಂಕವಾಗಿದೆ. ಸಮಾಜಕ್ಕೆ ಇದು ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ? ಎಂದು ಬೇಸರವನ್ನು ಹೊರಹಾಕಿದರು. ನೀವು ಸಾಮಾನ್ಯ ಜಾಮೀನು ಪಡೆಯುವವರೆಗೂ ನಾವು ನಿಮ್ಮನ್ನು ರಕ್ಷಿಸಬೇಕಿದೆ ಎಂದರು.

    ರಾಜ್ ಕುಂದ್ರಾ ಪರ ವಾದ ಮಂಡಿಸಿದ ವಕೀಲರು, ಐಪಿಸಿ ಸೆಕ್ಷನ್ 67 ಮತ್ತು 67ಎ ಐಟಿ ಕಾಯ್ದೆಗಳು ಬೇರೆ ಬೇರೆ ಅಪರಾಧಗಳಾಗಿವೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಇಬ್ಬರು ಮಹಿಳೆಯರು ಅಶ್ಲೀಲವಾದ ಕೆಲವು ದೃಶ್ಯಗಳನ್ನು ನೀಡಿದ್ದಾರೆ ಎಂಬ ಆರೋಪವಿದೆ. ಅದು ಕೇವಲ ಅಶ್ಲೀಲವಾಗಿದ್ದರೆ, ಅದು ಜಾಮೀನಿಗೆ ಅರ್ಹವಾಗಿದೆ. ಆದರೆ, ಲೈಂಗಿಕವಾಗಿ ಶೋಷಣೆಯಾಗಿದ್ದರೆ, ಅದು ಜಾಮೀನು ರಹಿತವಾಗಿರುತ್ತದೆ. ಆದರೆ, ರಾಜ್​ ಕುಂದ್ರಾ ಪ್ರಕರಣದಲ್ಲಿ ಲೈಂಗಿಕ ಶೋಷಣೆ ನಡೆದಿಲ್ಲ. ಇಬ್ಬರು ಮಹಿಳೆಯರು ತಮ್ಮ ದೇಹದ ಕೆಲ ಭಾಗಗಳನ್ನು ಬಹಿರಂಗಪಡಿಸಿದ್ದಾರೆ ಎಂಬುದು ಇಲ್ಲಿನ ಆರೋಪವಾಗಿದೆ. ಒಬ್ಬ ವ್ಯಕ್ತಿಯನ್ನು ನಗ್ನವಾಗಿ ತೋರಿಸುವುದು ಲೈಂಗಿಕ ಶೋಷಣೆಯಾಗುವುದಿಲ್ಲ. ಹೀಗಾಗಿ ಇದಕ್ಕೆ ಸೆಕ್ಷನ್​ 67ಎ ಅನ್ವಯಿಸುವುದಿಲ್ಲ ಎಂದು ರಾಜ್​ ಕುಂದ್ರಾ ಪರ ವಕೀಲರು ಹೇಳಿದ್ದಾರೆ. (ಏಜೆನ್ಸೀಸ್​)

    ಮಾವನ ಮಾತಿಂದ ರೊಚ್ಚಿಗೆದ್ದು ಪ್ರಿಯಕರನ ಜತೆ ಸೇರಿ ಭಾರಿ ಸಂಚು ರೂಪಿಸಿದ್ದ ಸೊಸೆ ಸಿಕ್ಕಿಬಿದ್ದಿದ್ದೇ ರೋಚಕ!

    ಟ್ರಾಫಿಕ್​ ಪೊಲೀಸರಿಂದಲೇ ರಸ್ತೆ ದುರಸ್ತಿ! ಬಿಬಿಎಂಪಿ ವಿರುದ್ಧ ಜನಾಕ್ರೋಶ

    ಅರುಣಾಚಲ ಪ್ರದೇಶದ ಗಡಿಯಲ್ಲಿ ಭೂಕಬಳಿಸುವ ಚೀನಾ ಪ್ರಯತ್ನಕ್ಕೆ ಭಾರತದಿಂದ ದಿಟ್ಟ ಉತ್ತರ: ರಾಜನಾಥ್​ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts