More

    ಮೋರಾಟೋರಿಯಂ ಅವಧಿಗೇಕೆ ಹೆಚ್ಚುವರಿ ಬಡ್ಡಿ; ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಲಾಕ್​ಡೌನ್​ ವೇಳೆ ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಸಮಯಕ್ಕೂ ವಿಧಿಸಿದ ಬಡ್ಡಿಮನ್ನಾ ವಿಚಾರವಾಗಿ ಒಂದು ವಾರದೊಳಗೆ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

    ಮೋರಾಟೋಟರಿಯಂ ಅವಧಿಯಲ್ಲಿ ಹೆಚ್ಚುವರಿ ಬಡ್ಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಅಥವಾ ನಿರ್ಧಾರ ಕೈಗೊಳ್ಳದ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​, ಒಂದು ವಾರದ ಗಡುವು ನೀಡಿದೆ.

    ಇದನ್ನೂ ಓದಿ; ನಿಷೇಧವಾಗುತ್ತಾ 2 ಸಾವಿರ ರೂ. ಮುಖಬೆಲೆ ನೋಟು? ಪ್ರಿಂಟ್​ ಏಕೆ ಮಾಡ್ತಾಯಿಲ್ಲ ಗೊತ್ತಾ? 

    ಈ ವಿಚಾರದಲ್ಲಿ ನಿಲುವು ಪ್ರಕಟಿಸಲು ನೈಸರ್ಗಿಕ ವಿಕೋಪ ಕಾಯ್ದೆಯಡಿಯಲ್ಲಿ ಸಾಕಷ್ಟು ಅವಕಾಶವಿದೆ. ಆದರೆ, ಕೇಂದ್ರ ಸರ್ಕಾರ ಆರ್​ಬಿಐ ಮರೆಯಲ್ಲಿ ಅಡಗಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಮೂರ್ತಿ ಅಶೋಕ್​ ಭೂಷಣ್​ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

    ಪೀಠದ ಇನ್ನುಳಿದ ನ್ಯಾಯಮೂರ್ತಿಗಳಾದ ಆರ್​. ಸುಭಾಷ್​ ರೆಡ್ಡಿ ಹಾಗೂ ಎಂ.ಆರ್​. ಷಾ ಕೂಡ ಕೇಂದ್ರದಿಂದ ವಿವರಣೆ ಬಯಸಿದರು. ಬಡ್ಡಿಯ ಮತ್ತೆ ಬಡ್ಡಿ ವಿಧಿಸಬಹುದೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಂತಿಮವಾಗಿ ಸಾಲಿಸಿಟರ್​ ಜನರಲ್​ ತುಷಾರ್​ಮೆಹ್ತಾ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.

    ಇದನ್ನೂ ಓದಿ; ಭಕ್ತರಿಲ್ಲದ ಶಬರಿಮಲೆ ದೇಗುಲದಲ್ಲಿ ಆಭರಣಗಳ ಲೆಕ್ಕಾಚಾರ; ಸಾವಿರ ಕೆಜಿ ಚಿನ್ನ ಯಾರ ಪಾಲಾಗುತ್ತೆ ಗೊತ್ತಾ? 

    ಇನ್ನೊಂದೆಡೆ ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್​ ಸಿಬಲ್​, ಸಾಲ ಮರುಪಾವತಿ ಅವಧಿ ಹೊಂದಾಣಿಕೆ ಆಗಸ್ಟ್​ 31ಕ್ಕೆ ಕೊನೆಗೊಳ್ಳುತ್ತಿದೆ. ಅರ್ಜಿ ವಿಚಾರಣೆ ನಡೆಯವ ತನಕ ಅದನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ಸೆಪ್ಟಂಬರ್​ 1ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.

    ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts