More

    ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕೋರಿದ ಅರ್ಜಿ ಪರಿಶೀಲನೆಗೊಪ್ಪಿದ ಸುಪ್ರೀಂ ಕೋರ್ಟ್​

    ನವದೆಹಲಿ: ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ (ಎಸ್​ಸಿ)ಯ ಸ್ಥಾನಮಾನ ಕೋರಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.

    ಪರಿಶಿಷ್ಟ ಜಾತಿಯಲ್ಲಿದ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರನ್ಜು ದಲಿತ ಕ್ರಿಶ್ಚಿಯನ್ನರು ಎಂದು ಪರಿಗಣಿಸಿ ಸರ್ಕಾರದಿಂದ ಎಸ್​ಸಿ ಸಮುದಾಯಕ್ಕೆ ಸಿಗುವ ಸೌಲಭ್ಯ ಇವರಿಗೂ ಸಿಗಬೇಕು ಎಂಬ ಬೇಡಿಕೆಯನ್ನು ಅರ್ಜಿಯಲ್ಲಿ ಮಂಡಿಸಲಾಗಿದೆ. ಈ ಅರ್ಜಿಯನ್ನು ನ್ಯಾಷನಲ್ ಕೌನ್ಸಿಲ್ ಆಫ್ ದಲಿತ್ ಕ್ರಿಶ್ಚಿಯನ್ಸ್​ ಸಲ್ಲಿಸಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಮಿನಿಸ್ಟ್ರಿ ಆಫ್ ಸೋಷಿಯಲ್ ಜಸ್ಟೀಸ್​ ಆ್ಯಂಡ್ ಎಂಪವರ್ಮೆಂಟ್​, ನ್ಯಾಷನಲ್ ಕಮಿಷನ್​ ಫಾರ್ ಷೆಡ್ಯೂಲ್ಡ್​ ಕಾಸ್ಟ್ಸ್​, ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್​ ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ ಸುಪ್ರೀಂ ಕೋರ್ಟ್​ನ ಸಿಜೆಐ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ನೋಟಿಸ್ ನೀಡಿದೆ.

    ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಇಸ್ಲಾಂನಲ್ಲೂ ಇದು ನಡೆಯುತ್ತದೆ. ಇಸ್ಲಾಂನಲ್ಲೂ ಮೀಸಲಾತಿ ಇಲ್ಲ. ಹೀಗಾಗಿ ನಾವೇಕೆ ಅದನ್ನೂ ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಬಾರದು ಎಂದು ಪ್ರಶ್ನಿಸಿದೆ.

    ಅರ್ಜಿಯಲ್ಲಿರುವ ಸಾರ: ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ವಿಸ್ತರಿಸಬೇಕು. ಅವರಿಗೂ ಶಿಕ್ಷಣದಲ್ಲಿ, ಸ್ಕಾಲರ್​ಷಿಪ್​, ಉದ್ಯೋಗ ಮತ್ತು ಇತರೆ ಸೌಲಭ್ಯಗಳಲ್ಲಿ ಮೀಸಲು, ವಿಶೇಷ ಸವಲತ್ತುಗಳನ್ನು ಒದಗಿಸಬೇಕು. ಅದೇ ರೀತಿ ಅಟ್ರಾಸಿಟಿ ಕೇಸ್​ ದಾಖಲಿಸುವ ಅವಕಾಶವನ್ನೂ ಪರಿಷ್ಕೃತ ಕಾಯ್ದೆ ಪ್ರಕಾರ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಅರ್ಜಿಯಲ್ಲಿದೆ. (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts