More

    ಈ ಎರಡು ನಂಬರ್​ಗಳಿಂದ ಕರೆ-ಮೆಸೇಜ್​ ಬಂದರೆ ಪ್ರತಿಕ್ರಿಯಿಸಬೇಡಿ ಎಂದ ಎಸ್​ಬಿಐ!

    ನವದೆಹಲಿ: ಆನ್​ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನೇದಿನೆ ಒಂದಲ್ಲ ಒಂದು ಕಡೆ ಒಂದಲ್ಲ ಒಂದು ರೀತಿಯಲ್ಲಿ ವಂಚಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.

    ಅದರಲ್ಲೂ ಈ ಎರಡು ಮೊಬೈಲ್​ಫೋನ್​ ನಂಬರ್​ಗಳಿಂದ ಕರೆ ಬಂದರೆ ಹುಷಾರು ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಮುನ್ನೆಚ್ಚರಿಕೆಯನ್ನು ನೀಡಿದೆ. ಎಸ್​​ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್​ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್​ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.

    ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್​ಗಳು ಬ್ಯಾಂಕ್​ಗೆ ಸಂಬಂಧಪಟ್ಟವಲ್ಲ ಎಂದು ಸ್ಪಷ್ಟನೆ ನೀಡಿರುವ ಎಸ್​ಬಿಐ, ಆ ನಂಬರ್​ಗಳ ಕರೆ ಮತ್ತು ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬಾರದು ಎಂದು ತಿಳಿಸಿದೆ.

    ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts