More

    ಹೊಸ ಕಾಯ್ದೆಯಿಂದ ಕರ ಉಳಿತಾಯ

    ಹುಬ್ಬಳ್ಳಿ: ಇಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ ಸಭಾ ಭವನದಲ್ಲಿ ಶುಕ್ರವಾರ ನೇರ ತೆರಿಗೆ ಕುರಿತು ವಿಚಾರ ಸಂಕಿರಣ ಏರ್ಪಾಟಾಗಿತ್ತು.
    ನೇರ ತೆರಿಗೆ ಮಂಡಳಿ ಅಧ್ಯಕ್ಷ, ಮುಂಬೈನ ಲೆಕ್ಕಪರಿಶೋಧಕ ಪಿಯೂಷ್ ಎಸ್. ಛಾಜೆದ್ ಮಾತನಾಡಿ, ಆದಾಯ ತೆರಿಗೆ ಕಲಂ 44ಎಡಿ ಕುರಿತು ವಿವರಿಸಿ, ತೆರಿಗೆದಾರರಿಗೆ ಆಗುವ ಲಾಭ ಮತ್ತು ನಷ್ಟದ ಕುರಿತು ತಿಳಿಸಿದರು.
    ಲೆಕ್ಕಪರಿಶೋಧಕ ಸಚಿನ್ ಪಾಟೀಲ ಹಾವೇರಿ ಮಾತನಾಡಿ, ಇತ್ತೀಚಿನ ಕಾಯ್ದೆ ಬದಲಾವಣೆ ಪ್ರಕಾರ ಎರಡು ವಿಧಾನದಲ್ಲಿ ತೆರಿಗೆದಾರರಿಗೆ ಹೆಚ್ಚಿನ ಕರ ಉಳಿತಾಯವಾಗುವ ವಿಧಾನ ಅನುಸರಿಸಲು ಸಲಹೆ ನೀಡಿದರು.
    ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ್ ಜೆ. ಮುನ್ನೊಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ರಿಷಬ್ ಉಪಾಧ್ಯಾಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts