More

    ಯುವಜನತೆ ಜಾನಪದ ಸಾಹಿತ್ಯ ಉಳಿಸಿ

    ಕೊಲ್ಹಾರ: ಜನಸಾಮಾನ್ಯರ ಸ್ವತ್ತಾದ ಜಾನಪದ ಸಾಹಿತ್ಯವನ್ನು ಯುವಜನತೆ ಉಳಿಸಿ ಬೆಳೆಸಬೇಕು ಎಂದು ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.

    ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕಂಬಿಮಂಟಪದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ಕೊಲ್ಹಾರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಇತ್ತೀಚೆಗೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ರಾಜ್ಯ ಸರ್ಕಾರ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. 60 ವರ್ಷ ಮೇಲ್ಪಟ್ಟ ಜಾನಪದ ಕಲಾವಿದರಿಗೆ ಗೌರವ ಧನ ಮಂಜೂರು ಮಾಡಲಾಗುತ್ತಿದ್ದು, ಅದರಂತೆ 45 ಅಥವಾ 50 ವಯಸ್ಸಿನ ಕಲಾವಿದರನ್ನೂ ಗುರುತಿಸಿ ಸರ್ಕಾರ ಗೌರವ ಧನ ಮಂಜೂರು ಮಾಡಬೇಕು ಎಂದು ಈಗಾಗಲೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ದಿಸೆಯಲ್ಲಿ ರಾಜ್ಯ ಜಾನಪದ ಪರಿಷತ್ ಸದಾಕಾಲ ಜಾನಪದ ಕಲಾವಿದರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಯುವ ಸಮೂಹ ಜಾನಪದ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಂಥ ಕಾರ್ಯ ಕೈಗೊಳ್ಳಬೇಕು ಎಂದರು.

    ದಿಗಂಬರಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳಾದ .ಗು.ಸಿದ್ದಾಪೂರ, ಜಗದೀಶ ಸಾಲಳ್ಳಿ, ಗೂಳಪ್ಪ ಯರನಾಳ, ಸಿದ್ರಾಮ್ಮಪ್ಪ ಹೊರ್ತಿ, ಮಲ್ಲಪ್ಪ ಗಣಿ, ಶಂಕ್ರಯ್ಯ ಚಿಕ್ಕಮಠ ಇತರರಿದ್ದರು. ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಹಿಂದಿನ ತಾಲೂಕು ಅಧ್ಯಕ್ಷ ಬಿ.ಎಸ್.ಹಂಗರಗಿ ನೂತನ ತಾಲೂಕಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಪದಪತ್ರ ಪ್ರದಾನ ಮಾಡಿದರು. ಎಸ್.ಎಸ್.ಪತಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿನ್ನಪ್ಪ ಗಿಡ್ಡಪ್ಪಗೋಳ ಸ್ವಾಗತಿಸಿದರು. ರವಿ ಬಾಟಿ ನಿರೂಪಿಸಿದರು.

    ಕೊಲ್ಹಾರ ಪಟ್ಟಣದ ವಿವಿಧ ಕ್ಷೇತ್ರದ ಸಾಧಕರಾದ ರಾಮಪ್ಪ ಬೆಳ್ಳುಬ್ಬಿ, ಹನಮಂತ ಬಡಿಗೇರ, ಡೋಂಗ್ರಿಸಾಬ ನದಾಫ್, ಶಿವಪ್ಪ ಪಟೇದ, ಗಂಗವ್ವ ಸೊನ್ನದ, ರುಕ್ಮವ್ವ ಕೊಠಾರಿ, ಕಲ್ಲಪ್ಪ ಏಳಗಂಟ್ಟಿ, ತಬ್ಬಣ್ಣ ಮೇತ್ರಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಕಲೆ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts