More

    ಜನಾಂಗದ ಸಂಸ್ಕೃತಿ, ಪರಂಪರೆ ಉಳಿಸಿ

    ಸಿದ್ದಾಪುರ: ಕ್ರೀಡಾಕೂಟದ ಮೂಲಕ ಮೊಗೇರ ಸಮಾಜದ ಸಂಘಟನೆಯಾಗುತ್ತಿದೆ. ಕ್ರೀಡೆಯೊಂದಿಗೆ ಜನಾಂಗದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಮೊಗೇರ ಸೇವಾ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ ಹೇಳಿದರು.

    ಸಿದ್ದಾಪುರ-ಅಮ್ಮತ್ತಿ ಹೋಬಳಿ ಅಮೃತ ಯುವ ಮೊಗೇರ ಸೇವಾ ಸಮಾಜದಿಂದ ಆಯೋಜಿಸಿರುವ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಮಾತನಾಡಿದರು. ತುಳುನಾಡಿನಿಂದ ಆಗಮಿಸಿ ನೆಲೆಸಿರುವ ಮೊಗೇರ ಸಮಾಜದವರು ಸುಮಾರು 36 ಸಾವಿರ ಜನರಿದ್ದಾರೆ. ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

    ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ.ಜನಾರ್ದನ್ ಮಾತನಾಡಿ, ಕ್ರೀಡೆಯಿಂದಾಗಿ ಸಮಾಜದಲ್ಲಿ ಸಾಕಷ್ಟು ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

    ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಕೆ. ಮಂಜು ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ರಮೇಶ್ ಉದ್ಘಾಟಿಸಿದರು. ಮೊಗೇರ ಸಮಾಜದ ಮಾಜಿ ಗೌರವ ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯ ಶಿಕ್ಷಕ ದೊಡ್ಡ ತಮ್ಮಯ್ಯ, ಎಂ.ಜಿ. ಚಂದ್ರ, ಉಮೇಶ್, ಪತ್ರಕರ್ತ ಕುಡೆಕಲ್ ಸಂತೋಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts