More

    ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಉಳಿಸಿ ಅಭಿಯಾನ

    ಮಂಗಳೂರು: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಅವರು ಏಕಾಂಗಿಯಾಗಿ ಬೈಕ್​ನಲ್ಲಿ 30,000 ಕಿ.ಮೀ. ಸಂಚರಿಸಿ 27 ರಾಷ್ಟ್ರಗಳ ಮಣ್ಣು ಉಳಿಸಿ ಅಭಿಯಾನ ನಡೆಸಿ, ಆ ಪ್ರಯಾಣವನ್ನು ಜೂನ್ ತಿಂಗಳಲ್ಲಿ ಸಮಾಪ್ತಿಗೊಳಿಸಿದ್ದರು. ಇದೀಗ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಗಳ ಸಮ್ಮುಖದಲ್ಲಿ ಸ್ವಯಂಸೇವಕರಿಂದ ಮಣ್ಣು ಉಳಿಸಿ ಅಭಿಯಾನ ಆಯೋಜಿಸಲ್ಪಟ್ಟಿದೆ.

    ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯಾಗಿರುವ ಡಾ.ಮಲ್ಲಿಕಾರ್ಜುನ ಎಲ್. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಕೇದಾರನಾಥ್ ಎಲ್ಲರನ್ನೂ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಜೆ. ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಪಶು ವಿಜ್ಞಾನಿ ಡಾ.ಶಿವಕುಮಾರ್, ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್, ತೋಟಗಾರಿಕಾ ವಿಜ್ಞಾನಿ ಡಾ. ರಶ್ಮಿ ಆರ್. ಹಾಗೂ ಜಿಲ್ಲೆಯ ವಿವಿಧ ಭಾಗದ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು. ಈಶ ಫೌಂಡೇಷನ್​ ಪರವಾಗಿ ಮಂಗಳೂರಿನ ಈಶ ಹಠಯೋಗ ತರಬೇತುದಾರ ಪ್ರವೀಣ್ ಕುಮಾರ್, ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕಿ ಪ್ರಿಯಲತ, ಕನ್ನಡ-ತುಳು ಚಿತ್ರ ನಿರ್ದೇಶಕ ಜಿ. ದಿನಕರ್ ಭಾಗಿಯಾಗಿದ್ದರು.

    ಮಣ್ಣಿನ ಗುಣಮಟ್ಟ ಕುಸಿಯುತ್ತಿರುವುದು ಹಾಗೂ ಮಣ್ಣು ಸಾಯುತ್ತಿರುವ ಬಗ್ಗೆ ಸದ್ಗುರು ವಿಸ್ತೃತವಾಗಿ ಮಾತಾಡಿರುವಂಥ ವಿಡಿಯೋದ ತುಣುಕುಗಳನ್ನು ತೋರಿಸಲಾಯಿತು. ಪ್ರವೀಣ್ ಕುಮಾರ್ ಅವರು ಮಾತನಾಡಿ, ಮಣ್ಣಿನ ಉಳಿಸುವಿಕೆಯಲ್ಲಿ ಪ್ರತಿಯೊಬ್ಬ ನಾಗರಿಕರ ಪಾಲು ಇದೆ ಎಂದು ವಿವರವಾಗಿ ತಿಳಿಸಿದರು. ನೆರೆದಿದ್ದ ಎಲ್ಲಾ ಕೃಷಿ ಪರಿಕರ ವಿತರಕರು ತಮ್ಮ ನಿತ್ಯ ವ್ಯವಹಾರದ ಜೊತೆಗೆ ಮಣ್ಣನ್ನು ಉಳಿಸುವ ಕಾಳಜಿ ಬೆಳೆಸುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದರು.

    ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಉಳಿಸಿ ಅಭಿಯಾನ

    ತಂದೆಯನ್ನೇ ಗುಂಡಿಟ್ಟು ಕೊಲ್ಲಿಸಿದ ಮಗಳು; ಅಪ್ಪ ಗಿಫ್ಟ್ ಕೊಟ್ಟಿದ್ದ ವಜ್ರದುಂಗುರವನ್ನೇ ಸುಪಾರಿಯಾಗಿ ನೀಡಿದ್ದಳು!

    ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts