More

    ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಲಿ

    ಯಲಬುರ್ಗಾ: ತಾಲೂಕಿನ ಬೇವೂರು ಗ್ರಾಮದಲ್ಲಿ ನೂತನ ಹೋಬಳಿ ಕೇಂದ್ರಕ್ಕೆ ಡಿ.26ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದರು.

    ಡಿ.26ರಂದು ಬೇವೂರಲ್ಲಿ ಹೋಬಳಿ ಕೇಂದ್ರ ಉದ್ಘಾಟನೆ

    ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೋಬಳಿ ಕೇಂದ್ರ ಪ್ರಾರಂಭದ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ಹೋಬಳಿ ಕೇಂದ್ರಕ್ಕೆ ತಹಸೀಲ್ದಾರ್ ಕಚೇರಿಯಿಂದ ನಾಡ ತಹಸೀಲ್ದಾರ್ ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಲು ತಿಳಿಸಲಾಗಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಹೋಬಳಿ ಕೇಂದ್ರ ಕಾಂಗ್ರೆಸ್ ರಚನೆಗೊಳಿಸಲಾಗಿದೆ. ಈ ಮುಂಚೆ ಮಂಗಳೂರು ಗ್ರಾಮಕ್ಕೆ ಸೇರಿದ ಎಲ್ಲಾ ಹಳ್ಳಿಗಳನ್ನು ಬೇವೂರು ಹೋಬಳಿ ಕೇಂದ್ರದ ವ್ಯಾಪ್ತಿಗೆ ಬರಲಿದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆ ಅನಷ್ಠಾನಕ್ಕೆ ಮುಂದಾಗಲಿ ಎಂದರು.

    ಇದನ್ನೂ ಓದಿ: ದಿಢೀರ್ ದೆಹಲಿ ಭೇಟಿ ಬಗ್ಗೆ ಡಿಕೆ ಶಿವಕುಮಾರ್​ ಹೇಳಿದ್ದೇನು?

    ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಬೇವೂರು ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ನೀಡಿದ್ದ ಭರವಸೆ ಈಗ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಗೇರಿ, ಉಪಾಧ್ಯಕ್ಷೆ ಲಕ್ಷ್ಮವ್ವ ಚುಕ್ಕಾಡಿ, ಸದಸ್ಯೆ ಮಲ್ಲಮ್ಮ ಗೊಂದಿ, ಎಸಿ ಮಹೇಶ ಮಾಲಗತ್ತಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಿಡಬ್ಲುೃಡಿ ಎಇಇ ಮಲ್ಲಿಕಾರ್ಜುನ, ಪಂಚಾಯತ್ ರಾಜ್ ಉಪವಿಭಾಗದ ಎಇಇ ಶ್ರೀಧರ ತಳವಾರ್, ಪಿಡಿಒ ಅಬ್ದುಲ್ ಗಫರ್, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಎ.ಜಿ.ಭಾವಿಮನಿ, ಭೀಮಣ್ಣ ಕೊಳಜಿ, ದ್ಯಾಮಣ್ಣ ಹಳ್ಳಿ, ಬಸಣ್ಣ ಚಿತವಾಡಗಿ, ಬುಡ್ಡಪ್ಪ ಹಳ್ಳಿ, ಹನುಮೇಶ ಕೋನನಗೌಡ್ರ, ದ್ಯಾಮಣ್ಣ ಪೂಜಾರ, ಮಾನಪ್ಪ ವಾಲ್ಮೀಕಿ, ರಾಜಶೇಖರ ಭಜಂತ್ರಿ, ಬಸವರಾಜ ಬುಡ್ಡನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts