More

    ನವಿಲುಗಳ ನಿಗೂಢ ಸಾವು

    ಸವಣೂರ (ಹಾವೇರಿ ಜಿಲ್ಲೆ): ತಾಲೂಕಿನ ಮಾದಾಪುರ ಗ್ರಾಮದ ಹತ್ತಿರದಲ್ಲಿರುವ ಡೀಮ್ಡ್ ಅರಣ್ಯ ಪ್ರದೇಶದಲ್ಲಿ 14 ನವಿಲುಗಳು ಶುಕ್ರವಾರ ಮೃತಪಟ್ಟಿವೆ. ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿರುವುದನ್ನು ಕಂಡ ರೈತರು ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ನವಿಲುಗಳ ಸಾವಿಗೆ ಕಾರಣ ಗೊತ್ತಾಗಿಲ್ಲ


    ನವಿಲುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆದರೆ, ವಿಷಪೂರಿತ ಆಹಾರ ಅಥವಾ ಕಲುಷಿತ ನೀರು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಪಶುಪಾಲನಾ ಇಲಾಖೆ ವೈದ್ಯಾಧಿಕಾರಿ ಡಾ. ರವೀಂದ್ರ ಹುಜರತ್ತಿ ಅವರು ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆಗೆ ಮುಂದಾದರು. ಈ ಸಂದರ್ಭದಲ್ಲಿ ಒಂದು ನವಿಲು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ತಕ್ಷಣ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
    ತಾಲೂಕಿನಲ್ಲಿರುವ ಸಾವಿರಾರು ನವಿಲುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಪದೇ ಪದೆ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.
    ದುಂಡಸಿ ಆರ್‌ಎಫ್‌ಒ ವೈ.ಆರ್. ನದಾಫ್ ಮಾತನಾಡಿ, ಅರಣ್ಯ ಇಲಾಖೆ ಜಮೀನು ಡೀಮ್ಡ್ ಅರಣ್ಯ ಪ್ರದೇಶವಾಗಿರುವ (ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ) ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ಪ್ರಾಣಿ, ಪಕ್ಷಿಗಳ ಕುರಿತು ಇಲಾಖೆ ವತಿಯಿಂದ ಯಾವುದೇ ರೀತಿಯ ಸರ್ವೇ ಕಾರ್ಯ ಕೈಗೊಂಡಿಲ್ಲ. ಈ ಕುರಿತು ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನವಿಲುಗಳ ಸಾವಿಗೆ ನಿಖರ ಮಾಹಿತಿ ಪಡೆದು ತಿಳಿಸಲಾಗುವುದು ಎಂದರು.
    ಕಾರಡಗಿ ಗ್ರಾಪಂ ಅಧ್ಯಕ್ಷ ಮೌಲಾಲಿ ಸವಣೂರು, ಸದಸ್ಯರಾದ ಶಿವಶಂಕರ ಸೊಪ್ಪಿನ, ಬಸವರಾಜ ಹರಕುಣಿ, ಮಹೇಶ ಅತ್ತಿಗೇರಿ, ಕಾಸಿಂಸಾಬ್ ಓಲೇಕಾರ, ಅರುಣ ವಾಲ್ಮೀಕಿ, ಮೋದಿನಸಾಬ್ ಖಾನಬಾಯಿ, ಶಂಭು ಹರಿಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts