More

    4ನೇ ದಿನ ಮುಂದುವರಿದ ಧರಣಿ ಸತ್ಯಾಗ್ರಹ

    ಸಾವಳಗಿ: ಸಾವಳಗಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ನೀಡಲಾಗಿದ್ದ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಮುಂದುವರಿದಿದ್ದು ಒಂದು ಕಡೆಯಾದರೇ ಕಳೆದ 3 ದಿನಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

    ಅಧಿವೇಶನದಲ್ಲಿ ತಾಲೂಕನ್ನಾಗಿ ಘೋಷಿಸದಿರುವುದರಿಂದ ಬೇಸರಗೊಂಡ ಜನಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಡಿ.10 ರಂದು ಸಾವಳಗಿ ಗ್ರಾಮದ ಪ್ರಮುಖ ನಗರಗಳಲ್ಲಿ ವಿವಿಧ ವಾದ್ಯಗಳ ಮೂಲಕ ಅರೆಬೆತ್ತಲೆ ಮೆರವಣಿಗೆ ಮಾಡುವುದರ ಮೂಲಕ ಸಾವಳಗಿಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಸದಸ್ಯರು, ಪಿಕೆಪಿಎಸ್ ನಂ.1 ಮತ್ತು ನಂ.2 ಎಲ್ಲ ನಿರ್ದೇಶಕ ಮಂಡಳಿ ಹಾಗೂ ಪಕ್ಷಾತೀತವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ವಿವಿಧ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ತಾಲೂಕು ಹೋರಾಟ ಸಮಿತಿಯವರು ತಿರ್ಮಾನಿಸಿದ್ದಾರೆ.

    ಹೋರಾಟ ಸಮಿತಿ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿ, ಪ್ರತಿ ಬಾರಿ ಸರ್ಕಾರ ಸಾವಳಗಿಯನ್ನು ನಿರ್ಲಕ್ಷೃ ಮಾಡುವುದರ ಜತೆಗೆ ಸಾವಳಗಿಯ ಜನತೆಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ತಾಲೂಕು ಕೇಂದ್ರಕ್ಕೆ ಯೋಗ್ಯವಲ್ಲದ ಸ್ಥಳಗಳನ್ನು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಘೋಷಣೆ ಮಾಡಿದ್ದಾರೆ. ಆದರೆ ಸಾವಳಗಿ ಬಗ್ಗೆ ಯಾವ ಸರ್ಕಾರದವರು ಗಮನಹರಿಸಿಲ್ಲ. ಅಂದಾಜು 24 ಹಳ್ಳಿಗಳನ್ನು ಒಳಗೊಂಡ ಹಾಗೂ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಭೌಗೋಳಿಕ ವಿಸ್ತೀರ್ಣ, ಸರ್ಕಾರಿ ಕಚೇರಿಗಳು ಹಾಗೂ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲ ಮೂಲಸೌಲಭ್ಯ ಇದ್ದರೂ ಕಡೆಗಣಿಸಿರುವುದು ಬೇಸರದ ಸಂಗತಿ. ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ತಾಲೂಕು ಕೇಂದ್ರವನ್ನಾಗಿ ಘೋಷಿಸದಿದ್ದರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಜವಬ್ದಾರಿ ಎಂದು ಎಚ್ಚರಿಸಿದರು.

    ಮುಖಂಡರಾದ ಸುಶೀಲಕುಮಾರ ಬೆಳಗಲಿ, ಅರ್ಜುನ ಜಾಧವ, ಮಹಾವೀರ ಜಮಖಂಡಿ, ಬಸವರಾಜ ಪರಮಗೊಂಡ, ಬಸವರಾಜ ಮಾಳಿ, ರಾಮಣ್ಣ ಬಂಡಿವಡ್ಡರ, ರಾಜುಗೌಡ ಪಾಟೀಲ, ಸುರೇಶ ಎಕ್ಸಂಬೆ, ಇರ್ಷಾದ ಮುಲ್ಲಾ, ವಿಠ್ಠಲ ಉಮರಾಣಿ, ಮಾದೇವ ಮಾಳಿ, ಮಲ್ಲುಗೌಡ ನ್ಯಾಮಗೌಡ, ದುಂಡಪ್ಪ ಸಾವಳಗಿ, ಶ್ರೀಕಾಂತ ಗೌಳಿ, ಮಹಾಂತೇಶ ಐಹೊಳ್ಳಿ, ತುಕಾರಾಮ ಬಾಪಕರ ಹಾಗೂ ಹಲವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts