More

    ಏಕದಿನ ತಂಡದ ನಾಯಕತ್ವ ಬದಲಾವಣೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಮುಖ್ಯಸ್ಥ ಗಂಗೂಲಿ..!

    ನವದೆಹಲಿ: ಟಿ20 ತಂಡದ ನಾಯಕತ್ವದಲ್ಲಿ ಮುಂದುವರಿಯಲು ಕೊಹ್ಲಿ ನಿರಾಕರಿಸಿದರು. ಹೀಗಾಗಿ ನಿಗದಿತ ಓವರ್‌ಗಳ ತಂಡಗಳಿಗೆ ಪ್ರತ್ಯೇಕ ನಾಯಕತ್ವ ಬೇಡ ಎಂದು ಆಯ್ಕೆ ಸಮಿತಿ ತೀರ್ಮಾನಿಸಿ, ರೋಹಿತ್ ಶರ್ಮ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ನಾಯಕತ್ವ ಬದಲಾವಣೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಎರಡೂ ತಂಡಗಳಿಗೆ ಇಬ್ಬರು ನಾಯಕರಾದರೆ ಗೊಂದಲಗಳೇ ಜಾಸ್ತಿ. ಹೀಗಾಗಿ ಚೇತನ್ ಶರ್ಮ ಸಾರಥ್ಯದ ಆಯ್ಕೆ ಸಮಿತಿ ನಾಯಕತ್ವ ಬದಲಾವಣೆ ತೀರ್ಮಾನ ಕೈಗೊಂಡಿತು’ ಗಂಗೂಲಿ ಬಹಿರಂಗಪಡಿಸಿದ್ದಾರೆ.

    ರಾಷ್ಟ್ರೀಯ ಆಯ್ಕೆ ಸಮಿತಿ ಕೆಲ ಸದಸ್ಯರ ತೀರ್ಮಾನದಂತೆ ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ವಜಾಗೊಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಕುರಿತು ಬಿಸಿಸಿಐ ಪ್ರಮುಖ ಪದಾಧಿಕಾರಿಗಳು ಕೂಡ ಕೊಹ್ಲಿ ಜತೆ ಮಾತುಕತೆ ನಡೆಸಿರಲಿಲ್ಲ ಎನ್ನಲಾಗಿದೆ. ನಿಗದಿತ ಓವರ್‌ಗಳ ತಂಡಗಳಿಗೆ ಪ್ರತ್ಯೇಕ ನಾಯಕರು ಸೂಕ್ತವಲ್ಲ, ನಾಯಕತ್ವ ವಿಭಜನೆ ತಪ್ಪಿಸುವ ದೃಷ್ಟಿಯಿಂದ ಆಯ್ಕೆ ಸಮಿತಿ ಈ ತೀರ್ಮಾನ ಕೈಗೊಂಡಿತು ಎಂದು ವರದಿಯಾಗಿದೆ. ಕೊಹ್ಲಿಗೆ 48 ಗಂಟೆಗಳ ಕಾಲ ಸಮಯ ನೀಡಿದ್ದರೂ ಮೌನ ವಹಿಸಿದರ ಲವಾಗಿ ಆಯ್ಕೆ ಸಮಿತಿಯೇ ಏಕದಿನ ನಾಯಕತ್ವದಿಂದ ವಜಾಗೊಳಿಸಿದೆ.

    ಆದರೆ, ಕೊಹ್ಲಿ ಸೂಕ್ತ ತೀರ್ಮಾನ ತಿಳಿಸದೆ ಮೌನಕ್ಕೆ ಶರಣಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ರೋಹಿತ್ ಶರ್ಮ ಅವರನ್ನು ನೇಮಕಮಾಡಲಾಗಿದೆ. ಸ್ಟೈಲಿಶ್ ಬ್ಯಾಟರ್ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಏಕದಿನ ತಂಡಕ್ಕೆ ನಾಯಕನಾಗಿರುವ ಹಂಬಲದಲ್ಲಿದ್ದರು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಏಕದಿನ ನಾಯಕತ್ವದಿಂದ ತಲೆದಂಡಕ್ಕೊಳಗಾಗಿರುವ ಸ್ಟಾರ್ ಬ್ಯಾಟರ್ ಬಿಸಿಸಿಐ ವಿರುದ್ಧ ಸಿಟ್ಟಾಗಿಯೇ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts