More

    ಚಿನ್ಮಯ ಮಿಷನ್ ನಿಂದ ಸೌಂದರ್ಯ ಲಹರಿ ಸಾಮೂಹಿಕ ಪಾರಾಯಣ ಮಹಾಯಜ್ಞ

    ಕಾಸರಗೋಡು: ಸೌಂದರ್ಯ ಲಹರಿ ಉಪಾಸನಾ ಮಂಡಳಿ ಕಾಸರಗೋಡು ವತಿಯಿಂದ ಸೌಂದರ್ಯ ಲಹರಿ ಸಾಮೂಹಿಕ ಪಾರಾಯಣ ಮಹಾಯಜ್ಞ ಸೆಪ್ಟಂಬರ್ 17ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಜರುಗಲಿದೆ. ಕನ್ನಡ ಹಾಗೂ ಮಲಯಾಳ ಭಾಷೆಯಲ್ಲಿನ ಸೌಂದರ್ಯಲಹರಿ ಉಪಾಸನಾ ಪುಸ್ತಕಗಳನ್ನು ಈಗಾಗಲೇ ವಿತರಿಸಲಾಗಿದ್ದು, ಒಂದುವರೆ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿರುವುದಾಗಿ ಮಹಾಯಜ್ಞ ಸನಿತಿ ಅಧ್ಯಕ್ಷ ಪಿ.ಕೆ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಪಾರಾಯಣಕ್ಕೆ ಮುನ್ನುಡಿಯಾಗಿ ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ. ಸನ್ಯಾಸಿ ಶ್ರೇಷ್ಠರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ಪ್ರತಿಭೆಗಳು, ಸಾಮಾಜಿಕ ರಂಗದ ಗಣ್ಯರು ಉಪಸ್ಥಿತರಿರುವರು. ಅಕ್ಷರ ತಪ್ಪಿಲ್ಲದೆ, ಉಚ್ಛಾರಣಾ ಶುದ್ಧಿಯೊಂದಿಗೆ ಪುಸ್ತಕ ನೋಡಿ ಶ್ಲೋಕಗಳನ್ನು ನಿರ್ದಿಷ್ಟ ರೀತಿಯಲ್ಲಿ ಪಾರಾಯಣ ಮಾಡಲು ಸಿದ್ಧರಿರುವ ಎಲ್ಲರನ್ನೂ ಸೌಂದರ್ಯ ಲಹರಿ ಉಪಾಸನಾ ಯಜ್ಞದ ಮಹಾಪಾರಾಯಣ ಕಾರ್ಯಕ್ರಮಕ್ಕೆ ಸ್ವಾಗತಿಸಲಿರುವುದಾಗಿ ತಿಳಿಸಿದರು.

    ಚಿನ್ಮಯ ಮಿಷನ್ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ಸ್ವಾಮಿ ವಿವಿಕ್ತಾನಂದ ಸರಸ್ವತೀ ನೇತೃತ್ವದಲ್ಲಿ ಸಮಿತಿ ಕಾರ್ಯಾಚರಿಸುತ್ತಿದೆ. ಸೌಂದರ್ಯಲಹರಿ ಎಂಬ ದೇವಿ ಸ್ತೋತ್ರ ಕೃತಿಯಲ್ಲಿ ನೂರು ಸ್ತೋತ್ರಗಳಿದ್ದು, ಇದರಲ್ಲಿ ಮೊದಲ 41 ಶ್ಲೋಕಗಳು ಆನಂದ ಲಹರಿ ಹಾಗೂ ಉಳಿದವುಗಳು ಸೌಂದರ್ಯ ಲಹರಿಯಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಕುಟುಂಬಗಳಿಗೆ ಪ್ರತ್ಯೇಕ ಕಲಿಕಾ ವ್ಯವಸ್ಥೆ ಏರ್ಪಡಿಸಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ. ಬಾಲಚಂದ್ರನ್, ಹರಿಹರನ್ ನಂಬ್ಯಾರ್, ಕೆ.ಎಂ.ನಾರಾಯಣನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts